ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾರ್ವಜನಿಕ ಸಭೆ ಸಮಾರಂಭ, ಜಾತ್ರೆ. ಸಂತೆ. ಹಾಗೂ ಮದುವೆ ಸಮಾರಂಭಗಳನ್ನು ಮುಂದೂಡಲು ಅಥವಾ ರದ್ದು ಮಾಡುವಂತೆ ಮೂಡಲಗಿ ದಂಢಾಧಿಕಾರಿಗಳು ಆದೇಶಿಸಿದರೂ ಮೂಡಲಗಿ ಸಂತೆ ನಡೆಯುತ್ತಿದೆ.
ಸಂತೆಗೆ ಮಿರಜ್ ಹಾಗೂ ಸಾಂಗ್ಲಿ ಕಡೆಯಿಂದ ತುಂಬಾ ವ್ಯಾಪಾರಸ್ಥರು ಬರುವುದರಿಂದ ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಸುಮನೆ ಇರುವುದರಿಂದ ಜನರ ಬಗ್ಗೆ ಕಾಳಜಿ ಇಲ್ಲವೆಂದು ಗೋಚರಿಸುವತ್ತಾಗಿದೆ.
ಶನಿವಾರ ನಡೆಯಬೇಕಿಂದ ಕನ್ನಡ ಸಾಹಿತ್ಯ ಸಮ್ಮೇಳನ ರದ್ದು ಮಾಡಿರುವ ತಾಲೂಕಾ ಆಡಳಿತ ಶನಿವಾರ ಸಂಜೆ ಸಂತೆ ರದ್ದು ಎಂದು ಹೇಳಿಕ್ಕೆ ನೀಡಿದ್ದರು ಆದರೆ ಆ ಸಂತೆ ಮಾತ್ರ ರದ್ದು ಆಗಿಲ್ಲಾ ಇದರಿಂದ ಕೆಲವು ಕನ್ನಡಾಭಿಮಾನಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.