Breaking News
Home / ಬೆಳಗಾವಿ / ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ

ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ

Spread the love

ಬೃಹತ್ ನೀರಾವರಿ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ರವಿವಾರದಂದು ನಗರದ ಹೊರವಲಯದಲ್ಲಿ ಗಟ್ಟಿ ಬಸವಣ್ಣ ಮಲ್ಟಿಪರ್ಪಜ ಯೋಜನೆಯ ಸ್ಥಳ ಪರೀಶಿಲನೆ ನಡೆಸಿ ಮಾತನಾಡುತ್ತಾ ಈ ಯೋಜನೆ ನನ್ನ ಬಾಲ್ಯದ ಕನಸಾಗಿದ್ದು, ಸರಕಾರದಿಂದ ಮಂಜೂರಾತಿ ದೊರೆತ್ತಿದ್ದು , ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವದು. ಈ ಯೋಜನೆಯಿಂದ ನಗರಕ್ಕೆ ಕೂಡಿಯುವ ನೀರು ಹಾಗೂ ಏತ ನೀರಾವರಿ ಮೂಲಕ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುದೆಂದು ಸಚಿವರು ತಿಳಿಸಿದರು
ನಗರದಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಈಜುಕೋಳಗಳೊಂದಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವದು.ಎಲ್ಲ ಇಲಾಖೆಗಳ ಯೋಜನೆಗಳೊಂದಿಗೆ ಈ ಸುಕ್ಷೇತ್ರ ಯೋಗಿಕೊಳ್ಳಕ್ಕೆ ಮೂಲಭೂತ ಸೌಲಭವನ್ನು ಕಲ್ಪಿಸಿ ಯಾತ್ರಾ ಸ್ಥಳಯನ್ನಾಗಿ ಮಾಡಲಾಗುವದು ಅಭಿವೃದ್ಧಿ ಪರ ಕಾರ್ಯಗಳೆ ನನ್ನ ಗುರಿಯಾಗಿದ್ದು, ಜನತೆ ಸಹಕಾರ ನೀಡಿ ಸಲಹೆ ಸೂಚನೆಗಳನ್ನು ನೀಡುವಂತೆ ಕರೆ ನೀಡಿದರು

ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗ್ಗೆ , ಸಚಿವರ ಆಪ್ತ ಕಾರ್ಯದರ್ಶಿ ರುದ್ರಯ್ಯ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಎಇಇ ಸಿದ್ದ್ರಾಮ ಕೊಟಬಾಗಿ ಹಾಗೂ ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಜಿ.ಪಂ ಸದಸ್ಯರು, ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು .


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …