Breaking News

ಸಾಯಿ ಸಿಟಿ ಸ್ಕ್ಯಾನ್ ಸೆಂಟರ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ-ಸತೀಶ ಜಾರಕಿಹೊಳಿ

Spread the love

 

ಮೂಡಲಗಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಜನತೆಗೆ ಸಿಟಿ ಸ್ಕ್ಯಾನ್ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆಗಾಗಿ , ನೂರಿತ ವೈದ್ಯರ ಸಲುವಾಗಿ ಜಿಲ್ಲಾ ಕೇಂದ್ರ ಹಾಗೂ ಬೇರೆ ಬೇರೆ ಪಟ್ಟಣಗಳಿಗೆ ಚಿಕಿತ್ಸೆ ಹಾಗೂ ವೈಧ್ಯಕೀಯ ಪರೀಕ್ಷೆಗಳಿಗೆ ತೆರಳಬೇಕಿತ್ತು. ಈ ಸಮಸ್ಯೆ ತಪ್ಪಿಸಲು ಹಾಗೂ ಜನತೆಗೆ ಅನಕೂಲುವಾಗುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ಈ ಆಸ್ಪತ್ರೆಗಳು ಹಾಗೂ ಸಿಟಿ ಸ್ಕ್ಯಾನ ಸೆಂಟರ್‍ನ ಸದುಪಯೋಗ ಪಡೆಯಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಯಮಕಣಮರಡಿ ಶಾಸಕ ಸತೀಶ ಜಾರಕಿಹೊಳಿ ನುಡಿದರು.


ಸೋಮವಾರದಂದು ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಡಾ: ಮಹೇಶ ಹಳ್ಳೂರ ಅವರ ಕಟ್ಟಡದಲ್ಲಿ ಪ್ರಥಮ ಬಾರಿಗೆ ಸೋನವಾಲಕರ ಮತ್ತು ಕನಕರಡ್ಡಿಯವರ ನೂತನ 24*7 ಶ್ರೀ ಸಾಯಿ ಸಿಟಿ ಸ್ಕ್ಯಾನ್ ಸೆಂಟರ್ ಹಾಗೂ ಕುರಣಗಿ ಕಟ್ಟದದಲ್ಲಿ ಡಾ.ವಿ.ಮನೋಹರ ಅವರ ಚಿಕ್ಕ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮೂಡಲಗಿ ನೂತನ ತಾಲೂಕಿನಲ್ಲಿ ಜನ ಸಾಮಾನ್ಯರಿಗೆ ವೈಧ್ಯಕೀಯ ಸೇವೆಗಳು ಬಹು ಬೇಗನೆ ದೊರೆಯುವ ನಿಟ್ಟಿನಲ್ಲಿ ಅತ್ಯಾಧುನಿಕ ವೈಧ್ಯಕೀಯ ಉಪಕರಣಗಳು ಹಾಗೂ ಚಿಕಿತ್ಸೆಯ ಅವಶ್ಯಕತೆ ಇದೆ. ಈ ಭಾಗದ ಜನತೆಯು ಇದರ ಸದುಪಯೋಗ ಪಡೆದುಕೊಂಡು ಬಹುಬೇಗ ಗುಣಮುಖರಾಗಲು ಸಹಾಯಕವಾಗುವದು. ಸ್ಥಳೀಯ ಹಾಗೂ ಸಮೀಪದಲ್ಲಿ ಸೇವೆಗಳು ದೊರೆಯುವದರಿಂದ ಖರ್ಚು ವೆಚ್ಚಗಳು ಹಾಗೂ ಸಮಯದ ಉಳಿತಾಯವಾಗುವದು. ಪ್ರತಿಯೊಬ್ಬರಿಗೂ ಜೀವ ಎನ್ನುವದು ಅತ್ಯಾಮೂಲ್ಯವಾದದ್ದು ಅಂತಹ ಶ್ರೇಷ್ಠವಾದ ಕಾಯಕದಲ್ಲಿರು ವೈಧ್ಯರು ಹಾಗೂ ಸಿಬ್ಬಂದಿಯವರು ಪ್ರಾಮಾಣ ಕ ಸೇವೆಯನ್ನು ನೀಡಬೇಕು ಎಂದ ಈ ಸಂದರ್ಭದಲ್ಲಿ ಹೇಳಿದರು.
ಮುನ್ಯಾಳ-ರಂಗಾಪೂರದ ಡಾ: ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು, ಈ ಸಂದರ್ಭದಲ್ಲಿ ಎಸ್.ಆರ್.ಸೋನವಾಲ್ಕರ, ಡಾ: ಶ್ರೀನಿವಾಸ ಕನಕರಡ್ಡಿ, ಡಾ: ಮನೋಹರ ವಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಮಲ್ಲಿಕಾರ್ಜುನ ಕಬ್ಬೂರ, ಅಶೋಕ ಸೋನವಾಲ್ಕರ, ಪ್ರಕಾಶ ಸೋನವಾಲ್ಕರ, ಆರ್.ಪಿ.ಸೋನವಾಲ್ಕರ, ಡಾ: ವೆಂಕಟೇಶ ಸೋರಗಾವಿ, ಕೆ.ಟಿ.ಗಾಣ ಗೇರ, ಡಾ.ಎಸ್.ಎಸ್.ಪಾಟೀಲ, ಡಾ ಮಹೇಶ ಹಳ್ಳೂರ, ಡಾ. ಎಸ್.ಎಮ್ ಕರಿಗಾರ, ಡಾ. ವೀಣಾ ಕನಕರಡ್ಡಿ, ಮಹೇಶ ಸೋನವಾಲ್ಕರ, ಪ್ರವೀಣ ಸೋನವಾಲ್ಕರ, ಸಂಗಪ್ಪ ಸುರನ್ನವರ, ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಎಮ್.ವಾಯ್ ಮರೆಪ್ಪಗೋಳ ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಹಾಲಪ್ಪ ಬಾಲದಂಡಿ ಸೇರಿದಂತೆ ಅನೇಕ ಗಣ್ಯರು ಇದ್ದರು.

 


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …