Breaking News
Home / ಬೆಳಗಾವಿ / ತಾಲೂಕಿನ ಎಲ್ಲ ಸರಕಾರಿ ಪ್ರೌಢ ಶಾಲೆಗಳಿಗೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಾಲೂಕು ಅಧಿಕಾರಿಗಳ ನಡೆ-ಪ್ರೌಢ ಶಾಲೆಗಳ ಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಗೆ ಸಹಾಯಕವಾಗುವದು

ತಾಲೂಕಿನ ಎಲ್ಲ ಸರಕಾರಿ ಪ್ರೌಢ ಶಾಲೆಗಳಿಗೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಾಲೂಕು ಅಧಿಕಾರಿಗಳ ನಡೆ-ಪ್ರೌಢ ಶಾಲೆಗಳ ಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಗೆ ಸಹಾಯಕವಾಗುವದು

Spread the love


ಮೂಡಲಗಿ: ತಾಲೂಕಿನ ಎಲ್ಲ ಸರಕಾರಿ ಪ್ರೌಢ ಶಾಲೆಗಳಿಗೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಾಲೂಕು ಅಧಿಕಾರಿಗಳ ನಡೆ-ಪ್ರೌಢ ಶಾಲೆಗಳ ಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಗೆ ಸಹಾಯಕವಾಗುವದು. ಈ ನಿಟ್ಟಿನಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ನಿಯೋಜಿಸಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಸಂದರ್ಶನ ನೀಡುವ ಮೂಲಕ ಚಾಲನೆ ನೀಡಿದರು.

ತಾಲೂಕಿನಲ್ಲಿ ಬರುವ ಸರಕಾರಿ ಪ್ರೌಢ ಶಾಲೆಗಳಿಗೆ ಬಿಡುವಿನ ಸಮಯದಲ್ಲಿ ಸಂದರ್ಶನ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ, ವಿಷಯಗಳ ಕ್ಲೀಷ್ಠಾಂಶಗಳು, ವಿಶೇಷ ಪ್ಯಾಕೆಜ್‍ಗಳು. ನೈತಿಕತೆ, ಆಚಾರ ವಿಚಾರಗಳು, ನಿಯಮಿತವಾದ ಆಹಾರ, ನಿದ್ರೆ ವ್ಯಾಯಾಮಗಳೊಂದಿಗೆ ಆರೋಗ್ಯ ಪೂರ್ಣ ದೈಹಿಕತೆಗೆ ಹೆಚ್ಚಿನ ಆದ್ಯತೆ ನೀಡುವದು. ಶಿಕ್ಷಕರ ಪಾಲಕರ ಹಾಗೂ ಸಹಪಾಠಿಗಳ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಪಡೆಯುವದು. ಎಸ್.ಎಸ್.ಎಲ್.ಸಿ ನಂತರದ ಹಂತಗಳು, ಯಶಸ್ವಿ ಜೀವನ ರೂಪಿಸಿಕೊಳ್ಳುವದು ಹೇಗೆಂಬುದರ ಕುರಿತು ವಲಯ ವ್ಯಾಪ್ತಿಯಲ್ಲಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿ ವರ್ಗದವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟಿರುತ್ತಾರೆ.

    ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳನ್ನು ಪ್ರೋತ್ಸಾಹಿಸುವದು ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಜೀವನ ಸಾಧನೆ, ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡೆದುಕೋಳ್ಳಲು ಪ್ರೇರೆಪಿಸಿದರು. ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ತಾಲೂಕಾ ಹಂತದ ಅಧಿಕಾರಿಗಳು ಶಾಲಾ ಭೇಟಿ ನೀಡುತ್ತಿರುವದು ವಿಶೇಷವಾಗಿದೆ. ಕಂದಾಯ, ಕೃಷಿ, ನೀರು ನೈರ್ಮಲ್ಯ, ಸಿಡಿಪಿಒ, ಹೆಸ್ಕಾಂ, ಪೋಲಿಸ್, ಪಂಚಾಯತ ರಾಜ್ಯ, ಸಮಾಜ ಕಲ್ಯಾಣ, ನಗರಸಭೆ, ಪಶುಸಂಗೋಪನೆ, ಬಿಸಿಎಮ್, ಅರಣ್ಯ, ಕೆ.ಎಸ್ ಆರ್.ಟಿಸಿ, ನೀರಾವರಿ ಇಲಾಖೆಯ ಅಧಿಕಾರಿ ಬಿಡುವಿನ ಸಮಯದಲ್ಲಿ ಭಾಗವಹಿಸುತ್ತಿದ್ದಾರೆ.

    ಭೇಟಿ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರೌಢ ಶಾಲೆಗಳಿಗೆ ತಾಪಂ ಇಒ ಬಸವರಾಜ ಹೆಗ್ಗನಾಯಕ ಸುಣಧೋಳಿ ಶಾಲೆ, ಬಿಲಕುಂದಿ ಶಾಲೆಗೆ ಡಿ.ವಾಯ್.ಎಸ್.ಪಿ ಡಿ.ಟಿ ಪ್ರಭು, ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾಂತ ಮೂಡಲಗಿ ಉರ್ದು ಪ್ರೌಢ ಶಾಲೆಗೆ, ಬಿಇಒ ಅಜೀತ ಮನ್ನಿಕೇರಿ ಅವರಾದಿ, ಹುಣಶ್ಯಾಳ ಪಿಜಿ ಪ್ರೌಢ ಶಾಲೆಗಳಿಗೆ, ಖಾನಟ್ಟಿ ಪ್ರೌಢ ಶಾಲೆಗೆ ಸಿಪಿಐ ವೇಂಕಟೇಶ ಮುರನಾಳ, ಶಿವಾಪೂರ(ಹ) ಪ್ರೌಢ ಶಾಲೆಗೆ ಪಿಎಸ್.ಐ ಮಲ್ಲಿಕಾರ್ಜುನ ಸಿಂಧೂರ ಭಾಗವಹಿಸಿದ್ದರು.


Spread the love

About Ad9 Haberleri

Check Also

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

Spread the loveಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ …