Breaking News
Home / ರಾಜ್ಯ>ಬೆಳಗಾವಿ / “ಜನರು ಸುಳ್ಳಿನ ಭಾಷಣಕ್ಕೆ ಮರುಳಾಗದೇ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು” ಸತೀಶ ಜಾರಕಿಹೊಳಿ

“ಜನರು ಸುಳ್ಳಿನ ಭಾಷಣಕ್ಕೆ ಮರುಳಾಗದೇ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು” ಸತೀಶ ಜಾರಕಿಹೊಳಿ

Spread the love

ಮೂಡಲಗಿ: “ಜನರು ಸುಳ್ಳಿನ ಭಾಷಣಕ್ಕೆ ಮರುಳಾಗದೇ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು” ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

ಮೂಡಲಗಿಯಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರ ನಡೆಸಿ, ಮಾತನಾಡಿದ ಅವರು, “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದ ಬಗ್ಗೆ ಜನರು ಜಾಗೃತರಾಗಬೇಕು” ಎಂದರು.

“ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡಿ, ಗೆಲ್ಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಬೇಕು. ಇಲ್ಲದಿದ್ದರೇ ಜನರು ಸೌಖ್ಯವಾಗಿದ್ದಾರೆ” ಎಂದು ಪ್ರಧಾನಿ ಮೋದಿ ಅವರು ಭಾವಿಸಿ, ಅಗತ್ಯ ವಸ್ತುಗಳ ಬೆಲೆಯನ್ನು ಮತ್ತೆ ಹೆಚ್ಚಳ ಮಾಡುತ್ತಾರೆ” ಎಂದು ಹಾಸ್ಯಧಾಟಿಯಲ್ಲಿ ಎಚ್ಚರಿಕೆ ನೀಡಿದರು.

 

ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಿ:

“ಕೇಂದ್ರ ಸರ್ಕಾರ ಎಲ್ಲ ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣಗೊಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದೆ. ಈಗಾಗಲೇ ಅನೇಕ ಸರ್ಕಾರಿ ಇಲಾಖೆಗಳನ್ನು ಖಾಸಗೀಯವರಿಗೆ ನೀಡಿದೆ. ಇನ್ನೂ ಅನೇಕ ಇಲಾಖೆಗಳನ್ನು ಖಾಸಗೀಕರಣಗೊಳಿಸಲು ಯೋಜನೆ ರೂಪಿಸುತ್ತಿದೆ. ಕೃಷಿ ವಿರೋಧಿ ಮಸೂದೆಗಳ ಮೂಲಕ ರೈತರಿಗೆ ತೊಂದರೆ ನೀಡಲು ಮುಂದಾಗಿದೆ. ಈ ಬಗ್ಗೆ ರೈತರು ಹೋರಾಟ ಮಾಡುತ್ತಿದ್ದರೂ, ರೈತರ ಸಮಸ್ಯೆ ಆಲಿಸಲು ಸರ್ಕಾರ ಹೋಗಿಲ್ಲ. ಇಂತಹ ಜನವಿರೋಧಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು” ಎಂದು ಹೇಳಿದರು.

“ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಕಾಂಗ್ರೆಸ್ ಸರ್ಕಾರಗಳ ಕೊಡುಗೆಯಿಂದ ದೇಶ ಪ್ರಗತಿ ಸಾಧಿಸಿದೆ. ಆದರೆ, ಬಿಜೆಪಿಯವರ ಸುಳ್ಳಿನ ಸರಮಾಲೆಯನ್ನು ನಂಬಿ ಜನರು ಯಾಮಾರಿದ್ದಾರೆ. ಇನ್ನು ಮುಂದೆ ಜನರು ಎಚ್ಚರ ವಹಿಸಬೇಕು. ಉಪಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ, ನನ್ನನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.

ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮುಖಂಡರಾದ ಎಸ್.ಆರ್. ಸೋನವಾಲ್ಕರ್, ವಿಜಯ ಸೋನವಾಲ್ಕರ್, ಅರ್ಜುನ್ ನಾಯಕವಾಡಿ, ಶಹಜಾನ್ ಡೊಂಗರಗಾವ್, ಲಗಮಣ್ಣಾ ಕಳಸಣ್ಣವರ, ಭೀಮಸಿ ಹಂದಿಗುಂದ ಸೇರಿ ಇನ್ನಿತರರು ಇದ್ದರು.


Spread the love

About Ad9 Haberleri

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …