ಮೂಡಲಗಿ : ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿಯಾದ ಬಾಳುವ ಪ್ರಕಾಶ್ ನಾಯಕ್ ಅವರು ಕಾಣೆಯಾಗಿದ್ದು ಈ ಕುರಿತು ಮೊದಲಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 13 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮದ ನಾಯಿಕರು ತೋಟದ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಕಾಣೆಯಾದ ಮಹಿಳೆಯ ಭಾವ( ಗಂಡನ ಅಣ್ಣ) ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಳವ್ವಾ ಪ್ರಕಾಶ ನಾಯಿಕ (28) ಕೆಂಪು ಮೈಬಣ್ಣ, ,ದುಂಡು ಮುಖ, ಎತ್ತರ 5.3 ಪೂಟ್ ಎತ್ತರ, ನೀಲಿ ಬಣ್ಣದ ಸೀರೆ – ಗೋಲ್ಡನ್ ಕಲರ ಜಂಪರ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಪ್ರಕಾರ ಚಿಹ್ನೆಯುಳ್ಳ ಮಹಿಳೆ ದೊರೆತರೆ ಮೂಡಲಗಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08334-251333 ಹಾಗೂ ಮೂಡಲಗಿ ಸಿಪಿಐ ದೂರವಾಣಿ ಸಂಖ್ಯೆ : 08334-251499 ನ್ನು ಸಂಪರ್ಕಿಸಬೇಕು ಎಂದು ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad9 News Latest News In Kannada
