Breaking News
Home / ಮೂಡಲಗಿ / ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ

ಮೂಡಲಗಿ: ಸುಗಮ ಸಂಚಾರಕ್ಕಾಗಿ ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿ ರಸ್ತೆ ಸುಧಾರಣೆಗೆ ಪಿ.ಎಂ.ಜಿ.ಎಸ್.ವಾಯ್ ಯೋಜನೆಯಡಿ 7.86 ಕೋಟಿ ರೂಪಾಯಿ ಮೊತ್ತ ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರದಂದು ತಾಲೂಕಿನ ಮಸಗುಪ್ಪಿ ಕ್ರಾಸ್ ಬಳಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 7.86 ಕೋಟಿ ರೂಪಾಯಿ ಮೊತ್ತದ ಮೂಡಲಗಿ-ಮಸಗುಪ್ಪಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹದಗೆಟ್ಟಿರುವ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. .

ಮಸಗುಪ್ಪಿ, ಗುಜನಟ್ಟಿ, ಜೋಕಾನಟ್ಟಿ, ಧರ್ಮಟ್ಟಿ, ಮೂಡಲಗಿ ಗ್ರಾಮೀಣ ಮತ್ತು ತಿಗಡಿ ಗ್ರಾಮಗಳು ಈ ಪ್ರಯೋಜನೆಕ್ಕೆ ಒಳಪಡಲಿದ್ದು, ಇದರಲ್ಲಿ 5 ಸೇತುವೆಗಳು ನಿರ್ಮಾಣವಾಗಲಿವೆ, ಮಸಗುಪ್ಪಿ ಕ್ರಾಸದಿಂದ ಮೂಡಲಗಿ ಡಾ.ಅಂಬೇಡ್ಕರ ವೃತ್ತದವರಿಗೆ ರಸ್ತೆ ಕಾಮಗಾರಿ ನಡೆಯಲಿದೆ, ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು. .
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ತಾಲೂಕಾ ಕೇಂದ್ರವಾಗಿರುವ ಮೂಡಲಗಿಗೆ ಸಂಚರಿಸಲು ಉತ್ತಮ ಗುಣಮಟ್ಟದ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ, ಸಾರ್ವಜನಿಕರಿಗೆ ಈ ರಸ್ತೆ ಕಾಮಗಾರಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು. .
ಲೋಳಸೂರ-ಬಳೋಬಾಳ ರಸ್ತೆ ಸುಧಾರಣೆ: .ಲೋಳಸೂರದಿಂದ ಬಳೋಬಾಳವರೆಗಿನ ಆರು ಕಿ.ಮೀ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಜುಲೈ ತಿಂಗಳ ಅಂತ್ಯದೊಳಗೆ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …