Breaking News

ಜಯ ಕರ್ನಾಟಕ ಜನಪರ ವೇದಿಕೆಯ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಜೊತೆಗೆ ಸಸಿ ವಿರಿಸಿದ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಚ್ಚರೆಡ್ಡಿ

Spread the love


ಮೂಡಲಗಿ: ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಬಿ. ಗುಣರಂಜನ್ ಶೆಟ್ಟಿ ಹಾಗೂ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಮೂಡಲಗಿ ಪಟ್ಟಣದಲ್ಲಿ ಶನಿವಾರದಂದು ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಜೊತೆಗೆ ಸಸಿಗಳ ವಿತರಣಾ ಕಾರ್ಯಕ್ರಮ ಜರುಗಿತು.
ಈ ವೇಳೆ ಪಿಎಸ್‍ಐ ಎಚ್.ವೈ.ಬಾಲದಂಡಿ ಮಾತನಾಡಿ, ಈ ಮಹಾಮಾರಿ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಜನರಿಗೆ ಆಹಾರ ಎಷ್ಟು ಅವಶ್ಯವಾಗಿದೆಯೋ ಅಷ್ಟೇ ಅವಶ್ಯವಾಗಿ ಆಮ್ಲಜನಕದ ಅವಶ್ಯವಾಗಿದೆ. ಆದರೆ ಆಹಾರ ಧಾನ್ಯಗಳ ಜೊತೆಗೆ ಸಸಿಗಳನ್ನು ವಿತರಣೆ ಮಾಡಿತ್ತಿರುವ ಸಂಘಟನೆಯ ಮೂಡಲಗಿ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಚ್ಚರೆಡ್ಡಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಮ್ಮ ಸುತ್ತಮುತ್ತ ಪ್ರಕೃತಿ ಸುಂದರವಾಗಿರಬೇಕು ಮತ್ತು ತಾಲೂಕನ್ನು ಹಸಿರೀಕರಣ ಮಾಡಬೇಕು ಇದಕ್ಕಾ ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ ಸಸಿ ನಡುವ ಮೂಲಕ ಮುಂದಿನ ಪೀಳಿಗೆಗೆ ನಾವು ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು ಅದುವೇ ನಿಜವಾದ ದೇಶ ಸೇವೆ ಎಂದು ಹೇಳಿದರು.
ಜಯ ಕರ್ನಾಟಕ ಜನಪರ ವೇದಿಕೆಯ ಮೂಡಲಗಿ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಚ್ಚರೆಡ್ಡಿ ಮಾತನಾಡಿ, ಸಂಘಟನೆಯ ಸಂಸ್ಥಾಪಕರಾದ ಬಿ. ಗುಣರಂಜನ್ ಶೆಟ್ಟಿ ಅವರು ನಿರಂತರವಾಗಿ ಈ ಕೊರೋನಾ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸುವಂತ ಕಾರ್ಯದ ಜೊತೆಗೆ ಸಸಿಗಳನ್ನು ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸಸಿ ನೆಟ್ಟರೇ ಸಾಲದು ಅದರ ಪೋಷಣೆ ಅಗತ್ಯ, ನಾವು ಮಕ್ಕಳನ್ನೂ ಸಾಕಿ ಸಲುವಾ ರೀತಿಯಲ್ಲಿ ಸಸಿಗಳನ್ನು ಕಾಪಾಡಿಕೊಂಡಾಗ ಮಾತ್ರ ಪರಿಸರವನ್ನು ಉಳಿಸುವ ಪ್ರಯತ್ನಕ್ಕೆ ಕೈಜೊಡಿಸದಂತೆ ಆಗುತ್ತದೆ. ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಜನ ಬಡ ಜನರಿಗೆ ಅಗತ್ಯವಾದ ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ ಅದರ ಜೊತೆಗೆ ಒಂದು ಸಸಿ ನೀಡಿದರೆ ಒಂದು ಒಳ್ಳೆಯ ಪರಿಸರ ವಾತಾವರಣ ನಿರ್ಮಾಣ ಮಾಡಿದಂತೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಮೂಡಲಗಿ ತಾಲೂಕಾಧ್ಯಕ್ಷ ಶಿವಗೌಡ ಪಾಟೀಲ್, ಉಪಾಧ್ಯಕ್ಷ ತಿಮಣ್ಣಾ ಕೋಳಿಗುಡ್ಡ, ಪದಾಧಿಕಾರಿಗಳಾದ ಭೀಮಪ್ಪ ಕೌಟಗೋಪ್ಪ, ಶಬ್ಬೀರ ಪೈಲ್ವಾನ್, ಸವಿತಾ ಹುಚ್ಚನ್ನವರ, ಪಾಂಡು ಕಾಲಹಳ್ಳಿ, ಅಪ್ಪಸಾಬ್ ನದಾಫ್ ಹಾಗೂ ಅನೇಕರು ಉಪಸ್ಥಿತಿದ್ದರು.
ಪೋಟೋ ಕ್ಯಾಪನ್ಸ್> ಮೂಡಲಗಿ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಪಟ್ಟಣದ ಬಡ ಜನರಿಗೆ ಆಹಾರ ಧಾನ್ಯಗಳ ಜೊತೆಗೆ ಸಸಿಗಳ ವಿತರಣಾ ಕಾರ್ಯಕ್ರಮ ಜರುಗಿತು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …