ಜಗತ್ತಿನಾದ್ಯಂತ ಕೊರೊನಾ ವೈರಸ್ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಲ್ಲದೇ ಇಡೀ ದೇಶದ ಬಹುತೇಕ ಕಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ರೆ ಮೂಡಲಗಿ ತಾಲೂಕಾ ದಂಡಾಧಿಕಾರಿ ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಘಟನೆ ಬೆಳಕಿಗೆ ಬಂದಿದೆ.
ಮೂಡಲಗಿ ನಗರದಲ್ಲಿ ಈ ಘಟನೆ ನಡೆದಿದೆ.ರಾಜ್ಯಾದ್ಯಂತ 144 ಕಲಂ ಜಾರಿ ಇದ್ದರೂ. ಕೊರೊನಾ ವೈರಸ್‍ಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ರವಿವಾರ ಮೂಡಲಗಿ ಸಂತೆ ರದ್ದು ಎಂದು ಆದೇಶಿಸಿದ ಹಿನ್ನೆಲೆ ಇವತ್ತು ನಗರದಲ್ಲಿ 100 ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಸಂತೆ ನಡೆಯುತ್ತಿದೆ.
ಹೌದು ಪ್ರತಿ ರವಿವಾರ ನಡೆಯುತ್ತಿರುವ ಮೂಡಲಗಿ ಸಂತೆ ತಾಲೂಕಿನಲ್ಲಿಯೇ ದೊಡ್ಡ ಸಂತೆ ಎಂದೇ ಪ್ರಸಿದ್ಧಿ ಪಡೆದಿದೆ. ಆದ್ರೆ ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನಲೆ ಯಾವುದೇ ಸಭೆ-ಸಮಾರಂಭ, ಜಾತ್ರೆ ಹಾಗೂ ಸಂತೆಗಳನ್ನು ನಡೆಸದಂತೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಆದೇಶ ನೀಡಿದ ಹಿನ್ನಲೆ ಪುರಸಭೆ ಅಧಿಕಾರಿಗಳು ಸಂತೆಯನ್ನು ರದ್ಧುಗೊಳಿಸಿದ್ದರು. ಆದ್ರೆ ಇಂದು ಬೆಳಗ್ಗೆ ಯಿಂದ ಬೇರೆ ನಗರ ಪಟ್ಟಣ ಹಾಗೂ ಹಳ್ಳಿಗಳಿಂದ ಬರುವ ವ್ಯಾಪಾರಸ್ಥರನ್ನು ಬಂದು ಸಂತೆ ನಡೆಸುತ್ತಿದ್ದಾರೆ.
ಸಂತೆ ನಡೆಯುತ್ತಿರುವ ಮಾಹಿತಿ ಇದ್ದರೂ ಕೂಡ ತಾಲೂಕು ದಂಡಾಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.
ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದು ಸಧ್ಯ ಸ್ಥಳಿಯರ ಆಕ್ರೋಷಕ್ಕೆ ಕಾರಣವಾಗಿದೆ.
Ad9 News Latest News In Kannada

