ಮೂಡಲಗಿ: ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಲವಾರು ಅನಿಷ್ಠ ಪದ್ಧತಿಗಳ ಪೈಕಿ ಬಾಲ್ಯವಿವಾಹವೂ ಒಂದು. ಇದು ಪ್ರಮುಖವಾಗಿ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ಈ ಪಿಡುಗಿಗೆ ಹಲವಾರು ಹೆಣ್ಣುಮಕ್ಕಳ ತುತ್ತಾಇದ್ದಾರೆ ಎಂದು ಮೂಡಲಗಿ ಪಿಎಸ್‍ಐ ಎಚ್ ವೈ ಬಾಲದಂಡಿ ಹೇಳಿದರು.
ಪಟಟ್ಟದ ಅಮನ ನಗರದಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ಮೂಡಲಗಿ ನ್ಯಾಯಾಲದ, ನ್ಯಾಯವಾಗಿಗಳ ಸಂಘ ಹಾಗೂ ಯುವ ಜೀವನ ಸೇವಾ ಸಂಸ್ಥೆ ಸಹಯೋಗದಲ್ಲಿ ಜರುಗಿದ ಕಾನೂನು ಅರಿವು ನೆರವು ಶಿಬಿರದಲ್ಲಿ ಮಾತನಾಡಿದ ಅವರು, ಒಂದೆಡೆ ಸರ್ಕಾರಗಳು ಆಗಲಿ ಬಿಡ್ರೀ ಹೆಣ ್ಣಗೆ ಹಂದಿನೆಂಟು, ಈಗ ಏಕೆ ತಾಳಿಯ ನಂಟು ? ಬಾಲ್ಯವಿವಾಹ ಸಿಲ್ಲಿಸಿ, ಮಕ್ಕಳ ಹಕ್ಕನ್ನು ರಕ್ಷಿಸಿ, ಮದುವೆಗಿಂತ ಮಕ್ಕಳ ಭವಿಷ್ಯ ಮುಖ್ಯ ಎಂಬಿತ್ಯಾದಿ ಘೋಷಣೆಗಳ ಮೊಳಗಿಸುತ್ತಿವೆ. ಆದರೆ ಹಲವೆಡೆ ಅಜ್ಞಾನ, ಅರಿವಿನ ಕೊರೆತೆಯಿಂದ 18 ವರ್ಷಕ್ಕೂ ಮೊದಲೇ ಮಕ್ಕಳ ಮದುವೆ ಮಾಡಿಸುವ ಪೋಷಕರು ಅವರ ಬದುಕನ್ನು ಬಲಿ ಕೊಡುತ್ತಲೇ ಇದ್ದಾರೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಬಾಲ್ಯವಿವಾಹ ಮಾಡಿದರೆ ಪೋಷಕರಿಗೆ ಕಾನೂನಿ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಸಾರ್ವಜನಿಕರು ಬಾಲ್ಯವಿವಾಹ ಬಗ್ಗೆ ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡುವುದು ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯ ಎಂದರು.
ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ದೇಶದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುವಂತ ಕರ್ತವ್ಯ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಸತೀಶ್ ಬಿಎಸ್, ಸಿಡಿಪಿಓ ಇಲಾಖೆಯ ಅಧಿಕಾರಿ ಇಂದ್ರಾ ಭೊವಿ, ಪುರಸಭೆ ಸದಸ್ಯ ಚೆನ್ನಪ್ಪ ಅಥಣ , ಯುವ ಜೀವನ ಸಂಸ್ಥೆಯ ಅಧ್ಯಕ್ಷ ರಮೇಶ ಉಪ್ಪಾರ, ಈರಪ್ಪ ಢವಳೇಶ್ವರ, ಗುರುನಾಥ ಗಂಗನ್ನವರ, ಸುಭಾಷ ಗೋಡ್ಯಾಗೊಳ, ಪೊಲೀಸ್ ಸಿಬ್ಬಂದಿ ಎನ್ ಎಸ್ ಒಡೆಯರ್ ಹಾಗೂ ಅಮನ ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.