Breaking News

ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚಾರಣೆ

Spread the love

 

ಮೂಡಲಗಿ: ಜಿ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡಲಗಿ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಸೆ. ೫ ರಂದು ಸೋಮವಾರ ಮುಂಜಾನೆ ೧೧ ಗಂಟೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ-೨೦೨೨ ನಿಮಿತ್ಯ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಸಾಧಕ ಶಿಕ್ಷಕರಿಗೆ ಅಭಿನಂದನಾ ಸಮಾರಂಭವು ಅರಭಾವಿಯ ಶ್ರೀ ಬಸವೇಶ್ವರ ಸಭಾ ಭವನ ಫ್ಯಾಕ್ಟರಿ ಕ್ರಾಸ್‌ದಲ್ಲಿ ಜರುಗಲಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾರಂಭದ ದಿವ್ಯ ಸಾನಿದ್ಯವನ್ನು ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಸಾನಿದ್ಯವನ್ನು ಸುಣಧೋಳಿಯ ಶ್ರೀ ಮ.ನಿ.ಪ್ರ.ಅ ಶಿವಾನಂದ ಮಹಾಸ್ವಾಮಿಗಳು, ಉದ್ಘಾಟಕರಾಗಿ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ, ಅಧ್ಯಕ್ಷತೆಯನ್ನು ಅರಭಾಂವಿ ಶಾಸಕರು, ಕೆ.ಎಂ.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಮುಖ್ಯ ಅತಿಥಿಗಳಾಗಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ, ಹಣಮಂತ ನಿರಾಣಿ, ಅತಿಥಿ ಉಪನ್ಯಾಸಕರಾಗಿ ವಿಶ್ರಾಂತ ಪ್ರಧ್ಯಾಪಕರಾದ ಪ್ರೋ. ಚಂದ್ರಶೇಖರ ಅಕ್ಕಿ, ಮುಖ್ಯ ಅತಿಥಿಗಳಾಗಿ ಡಿ.ಡಿ.ಪಿ.ಐ ಮೋಹನಕುಮಾರ ಹಂಚಾಟೆ, ಮೂಡಲಗಿ ತಹಶೀಲ್ದಾರ ಡಿ.ಜಿ ಮಹಾತ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ,ಮೂಡಲಗಿ ತಾಪಂ ಇಒ ಎಫ್.ಜಿ ಚಿನ್ನಣ್ಣವರ, ಗೋಕಾಕ ತಾಪಂ ಇಒ ಎಮ್.ಎಚ್ ದೇಶಪಾಂಡೆ, ಅರಭಾವಿ ಸಿಡಿಪಿಓ ವಾಯ್.ಕೆ ಗದಾಡಿ, ಗೋಕಾಕ ಟಿ.ಎಚ್.ಓ ಡಾ. ಮುತ್ತಣ್ಣ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ,ಅರಭಾವಿ ಪ.ಪಂ ಮುಖ್ಯಾಧಿಕಾರಿ ತುಕಾರಾಮ ಮಾದರ, ಗೋಕಾಕ ಮ.ಉ.ಯೋ ಸಹಾಕ ನಿರ್ದೇಶಕ ಎ.ಬಿ ಮಲಬನ್ನವರ ಹಾಗೂ ಪುರಸಭೆ, ಪ.ಪಂ ಹಾಗೂ ಗ್ರಾ.ಪಂ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Ad9 News

Check Also

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ವೇಳೆ ಗೈರಾದ ಅಧಿಕಾರಿಗಳು

Spread the love ಮೂಡಲಗಿ : ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ, ತಾಲೂಕು ಆಡಳಿತ, ತಾಲೂಕ ಪಂಚಾಯತ ಮೂಡಲಗಿ ಹಾಗೂ …

Leave a Reply

Your email address will not be published. Required fields are marked *