Breaking News

ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನಿಡಿದ ಭೀಮಪ್ಪ ಗಡಾದ

Spread the love

ಮೂಡಲಗಿ : ನಗರದಲ್ಲಿ ನಡೆದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಭೀಮಪ್ಪ ಗಡಾದ ನಾನು 2018 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಮತ್ತು ಮೂಡಲಗಿ ಪುರಸಭೆಯ ಆಡಳಿತ ಮಂಡಳಿಯ ಚುನಾವಣೆಯ ಸಮಯದಲ್ಲಿ ಪಕ್ಷ ದಿಂದ ನಮಗೆ ಯಾವುದೇ ರೀತಿಯ ಸಹಾಯ ದೊರಕಿರುವುದಿಲ್ಲ. ಗಮನಸಬೇಕಾದ ಅಂಶವೆಂದರೆ ಅಭ್ಯರ್ಥಿಗಳಿಗೆ ಪಕ್ಷದಿಂದ ನೀಡಲಾಗುಗುತ್ತಿರುವ ದ್ವಜಗಳನ್ನಾಗಲಿ ಚುನಾವಣಾ ಪ್ರಚಾರದ ಸಾಮಗ್ರೀಗಳ್ಳನ್ನಾಗಲಿ ನೀಡಲಿಲ್ಲ. ಅಲ್ಲದೇ ವಿಧಾನ ಸಭೆಯ ಚುನಾವಣೆಯ ಸಮಯದಲ್ಲಿ ಪಕ್ಷದ ನಾಯಕರರಾದ ಮಾನ್ಯ ಕುಮಾರಸ್ವಾಮಿಯವರಾಗಲಿ ಅಥವಾ ಬೇರೆ ಹಿರಿಯ ನಾಯಕರಾಗಲಿ ಪ್ರಚಾರ ಭಾಷಣಕ್ಕೂ ಸಹ ಬರಲಿಲ್ಲವೆಂದು ತಮಗೆ ತಿಳಿಸಲು ಙಗೆ ವಿಷಾಧವೆನಿಸ್ಸುತ್ತದೆ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸಮಿಶ್ರ ಸರಕಾರ ಅಸ್ಥಿತ್ವದಲ್ಲಿ ಇದ್ದ ಸಮತದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಲಕ್ಷದ ಕಾರ್ಯಕರ್ತರಲ್ಲಿ ನಾಮ ನಿರ್ದೇಶನ ಮಾಡಿದ್ದನ್ನು ಬಿಟ್ಟು ಕುಮಾರ ಸ್ವಾಮಿಯವರದು ಜಾರಕಿಹೊಳಿಯವರೊಂದಿಗೆ ಹೊಂದಾಣಿಕೆ ರಾಜಕೀಯವಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಅಲ್ಲದೇ ಜಾರಕಿಹೊಳಿಯವರು ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಎಂದು ಇತ್ತೀಚಿಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು ಮತ್ತು ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತ ಎಂದು ಪಕ್ಷದ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ಪ್ರಮುಖವಾಗಿ ಇದೂ ವರೆಗೂ ನಾನು ಅರಭಾವಿ ಕ್ಷೇತ್ರದ ಅಭ್ಯರ್ಥಿ ಯೆಂದು ಘೋಷಣೆ ಮಾಡಧೆ ಇರುವುದನ್ನುನೋಡಿದರೆ ಇನ್ನು ಮುಂದೆ ಜೆಡಿಎಸ್ ಪಕ್ಷದಲ್ಲಿ ಙಗೆ ಭವಿಷ್ಯವಿಲ್ಲವೆಂಬುದು ಸ್ಪಷ್ಡವಾಗಿ ಕಂಡುಬರುತ್ತದೆ.
ಕಾರಣ ಈ ಎಲ್ಲ ಅಂಶಗಳಿಂದ ಮನನೊಂದು ಮುಖ್ಯವಾಗಿ ಜಾರಕಿಹೊಳಿಯವರಿಗರ ಪಕ್ಕಕ್ಕೆ ಬರಲು ಆಹ್ವಾನ ನೀಡುತ್ತಿರುವುದಕ್ಕೆ ನನ್ನ ವಿರೋಧ ವಿರುತ್ತದೆ. ಆದ್ದರಿಂದ ಜೆಡಿಎಸ್ ಪಕ್ಕದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಮದಗುನಕಿ. ಮಲ್ಲಪ್ಪ ತೇರದಾಳ, ಸಿದ್ದು ಬಳಿಗಾರ, ಸಂಜು ಕಮತೆ ಇನಿತರರು ಉಪಸ್ಥಿತರಿದ್ದರು.


Spread the love

About Ad9 News

Check Also

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ವೇಳೆ ಗೈರಾದ ಅಧಿಕಾರಿಗಳು

Spread the love ಮೂಡಲಗಿ : ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ, ತಾಲೂಕು ಆಡಳಿತ, ತಾಲೂಕ ಪಂಚಾಯತ ಮೂಡಲಗಿ ಹಾಗೂ …

Leave a Reply

Your email address will not be published. Required fields are marked *