ಮೂಡಲಗಿ: ತಾಲೂಕಿನ ನಾಗನೂರು ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮೂಡಲಗಿ ಶಾಖೆಯ ಸದಸ್ಯರಾದ ಧರ್ಮಟ್ಟಿಯ ದಿವಂಗತರಾದ ಮೈಬೂಬ್‌ಸಾಬ್ ಉಸ್ಮಾನಸಾಬ್ ಮುಲ್ಲಾ ಕುಟುಂಬಕ್ಕೆ ಐವತ್ತು ಸಾವಿರ ಮತ್ತು ಬಸವರಾಜ್ ಮಾರುತಿ ಜುಲಪಿ ಅವರ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿಗಳ ಸಹಕಾರಿ ಸುರಕ್ಷಾ ಪರಿಹಾರ ನಿಧಿ ಚೆಕ್ಕನ್ನು ವಿತರಿಸಿಲ್ಲಾಯಿತು.
ಈ ಸಂಧರ್ಭದಲ್ಲಿ ಸೋಸಾಯಿಟಿ ಪ್ರಧಾನ ಕಛೇರಿ ಅಧ್ಯಕ್ಷ ಬಸವರಾಜ ತಡಸನ್ನವರ, ಮೂಡಲಗಿ ಶಾಖೆಯ ಅಧ್ಯಕ್ಷ ಸಿದ್ದು ಕೋಟಗಿ, ನಿರ್ದೇಶಕರರಾದ ಮಾರುತಿ ನೇಸೂರ, ಅನೀಲ ಕೌಜಲಗಿ, ಪಿ.ಕೃಷ್ಣಮೂರ್ತಿ, ಪ್ರಕಾಶ ಮೂಧೋಳ, ಚನ್ನಮಲ್ಲಪ್ಪ ಕುಡಚಿ, ಸುಭಾಸ ಲಂಕೆಪ್ಪನವರ, ಸಚಿನ ಸಂಕನ್ನವರ, ಮಹಾಲಿಂಗಪ್ಪ ತುಪ್ಪದ, ಹುಸೇನಸಾಬ ಥರಥರಿ, ಬಸವರಾಜ ಕಬ್ಬೂರ, ಹನಮಂತ ಕನಕಿಕೊಡಿ, ಪ್ರಧಾನ ಕಚೇರಿಯ ಉಪ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಶಾಖಾ ವ್ಯವಸ್ಥಾಕ ಗಂಗಾಧರ ಮುಕ್ಕುಂದ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.
