
ಮೂಡಲಗಿ ಪಟ್ಟಣದ ಲಕ್ಷ್ಮೀ ನಗರದ ಪುರಸಭೆಯ 15ನೇ ವಾರ್ಡಿನಲ್ಲಿ 15ನೇ ಹಣಕಾಸು ಯೋಜನೆಯಡಿ 2022 -23 ಸಾಲಿನ ಅನುದಾನದಲ್ಲಿ ಚರಂಡಿ ನಿರ್ಮಾಣಕ್ಕೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮತ್ತು ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು ಸೋಮವಾರದಂದು ಭೂಮಿ ನೆರವೇರಿಸಿದರು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಹುಸೇನಸಾಬ ಶೇಖ, ಪುರಸಭೆ ಅಭಿಯಂತರ ಡಿ.ಬಿ.ಪಠಾಣ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಮತ್ತು ಅನ್ವರ ನದಾಫ್, ರಾಜು ಪುಜೇರಿ, ಬಸು ಜಂಡೇಕುರುಬರ, ಮಲ್ಲು ಯಾದವಾಡ, ಸಂತೋಷ ಪತ್ತಾರ, ಪಿರಾಜಾದೆ, ರಾಜು ಭಜಂತ್ರಿ, ಬಸು ಶೆಕ್ಕಿ ಅಕ್ಷಯ ಕಂಬಾರ, ಸುಭಾಸ ಭಜಂತ್ರಿ ಮತ್ತಿತರರು ಇದ್ದರು.
Ad9 News Latest News In Kannada