ಮೂಡಲಗಿ: ಸ್ಥಳೀಯ ಕೆ.ಎಚ್ ಸೋನವಾಲಕರ ಪ್ರತಿಷ್ಠಾನ, ಲಕ್ಷ್ಮೀ ಶಿಕ್ಷಣ ಸಂಸ್ಥೆ, ಮೂಡಲಗಿ ಸ್ಪೋಟ್ಸ್ ಅಸೋಶಿಯನ್, ಸಮುದಾಯ ಆರೋಗ್ಯ ಕೇಂದ್ರ, ಎಮ್.ಇ.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ, ಶ್ರೀ ಶ್ರೀಪಾದಬೋಧ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳಗಾವಿಯ ಬಿಐಎಮ್.ಎಸ್ ಬ್ಲಡ್ ಬ್ಯಾಂಕ್, ಕರುನಾಡು ಸೈನಿಕ ತರಭೇತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಕೃಷ್ಣಪ್ಪ ಸೋನವಾಲಕರ 76 ನೇ ಜನ್ಮದಿನಾಚರಣೆ ಪ್ರಯುಕ್ತ 7 ನೇ ಬೃಹತ್ ಐಚ್ಚಿಕ ರಕ್ತದಾನ ಶಿಬಿರವು ಫೆ.10 ರಂದು ಸೋಮವಾರ ಮುಂಜಾನೆ 9-00 ಕ್ಕೆ ಕೆ.ಎಚ್.ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಲಿದೆ ಎಂದು ಕೆ.ಎಚ್ ಸೋನವಾಲಕರ ಪ್ರತಿಷ್ಠಾನ ಅಧ್ಯಕ್ಷ ಗೋವಿಂದಪ್ಪ ಸೋನವಾಲಕರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಸೋನವಾಲಕರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿಬಿರದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ದ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಸ್ವಾಮಿಗಳು ವಹಿಸುವರು. ಉದ್ಘಾಟಕರಾಗಿ ಕೆ.ಎಮ್.ಎಫ್ ರಾಜ್ಯಾಧ್ಯಕ್ಷರು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷತೆ ಗೋವಿಂದಪ್ಪ ಸೋನವಾಲಕರ, ಮುಖ್ಯ ಅತಿಥಿಗಳಾಗಿ ತಮ್ಮಣ್ಣಪ್ಪಾ ಸೋನವಾಲಕರ, ಸಂಗಮೇಶ ನಿರಾಣಿ, ಲಕ್ಷ್ಮೀಬಾಯಿ ಸೋನವಾಲಕರ, ಡಾ. ರವೀಂದ್ರ ಆಂಟಿನ, ನಾರಯಣ ಭರಮನಿ, ಡಿ ಎಸ್ ಪಿ. ಡಿ.ಟಿ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಜೀತ ಮನ್ನಿಕೇರಿ, CPI ಮೂಡಲಗಿ ವೆಂಕಟೇಶ ಮುರನಾಳ, PSI ಮೂಡಲಗಿ ಮಲ್ಲಿಕಾರ್ಜುನ ಸಿಂಧೂರ, ದೀಪಕ ಹರ್ದಿ, ಡಾ. ಭಾರತಿ ಕೋಣಿ, ಡಾ. ಶ್ರೀದೇವಿ ಬೋಬಾಟಿ, ಶಂಕರ ತುಕ್ಕನ್ನವರ, ಸೋಮಶೇಖರ ಮಗದುಮ್, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಸೋನವಾಲಕರ, ಮುಖ್ಯೋಪಾಧ್ಯಯ ಎಸ್.ಬಿ ನ್ಯಾಮಗೌಡರ ಮತ್ತಿತರರು ಭಾಗವಹಿಸುವರೆಂದು ತಿಳಿಸಿದ್ದಾರೆ.