Breaking News

*ನ.1ರಿಂದ ನ.5 ರವರಿಗೆ ಢವಳೇಶ್ವರದಲ್ಲಿ ವಿವಿಧ ದೇವಸ್ಥಾನಗಳ ಉದ್ಘಾಟನೆ ಕಾರ್ಯಕ್ರಮ ಹಾಗೂ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ*

Spread the love


ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಉಳಿಮುಟ್ಟದ ರಂಗೇಶ್ವರ ಮತ್ತು ಶಿವ ದೇವಾಲಯ ಹಾಗೂ ಲಕ್ಷ್ಮೀ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ನ.1 ರಿಂದ 5 ರವರಿಗೆ ಮರೇಗುದ್ದಿಯ ಶ್ರೀ ನಿರುಪಾಧೀಶ್ವರ ಮಹಾಸ್ವಾಮೀಜಿ ಅಧ್ಯಕ್ಷತೆ ಮತ್ತು ಸುಣಧೋಳಿ ಶ್ರೀ ಶಿವಾನಂದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ದೇವಸ್ಥಾನಗಳ ಉದ್ಘಾಟನೆಯ ಅಂಗವಾಗಿ ಪ್ರತಿದಿನ ರಬಕವಿಯ ಬೃಹ್ಮಾನಂದ ಮಠದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಪ್ರವಚನ ನೀಡುವರು.
ನ.1 ರಂದು ಮುಂ.೮ಕ್ಕೆ ಢವಳೇಶ್ವರ ಹಳೆ ಗ್ರಾಮದ ದೇವಸ್ಥಾನದಲ್ಲಿ ಶ್ರೀ ರಂಗೇಶ್ವರ ದೇವರ ಮೂರ್ತಿಗೆ ಮಹಾ ರುದ್ರಾಭಿಷೇಕ ಹಾಗೂ ಕಲಾಕರ್ಷನ ಕಾರ್ಯಕ್ರಮ ನಂತರ ಮಹಾ ಪ್ರಸಾದ ಜರುಗಲಿದೆ. ಸಂಜೆ 6ಕ್ಕೆ ಜರುಗುವ ಪ್ರವಚನವನ್ನು ಮಹಾಲಿಂಗಪೂರದ ಶ್ರೀ ರಾಜೇಂದ್ರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಡರಕೊಪ್ಪದ ಶ್ರೀ ದಯಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸುವರು, ತೊಂಡಿಕಟ್ಟಿಯ ಶ್ರೀ ವೆಂಕಟೇಶ ಮಹಾರಾಜ ಉಪಸ್ಥಿತರಿವರು. ವಹಿಸುವರು.
ನ.2 ರಂದು ಮುಂ.8ಕ್ಕೆ ಹಳೆ ಗ್ರಾಮದಲ್ಲಿ ಶ್ರೀ ರಂಗೇಶ್ವರ ದೇವರ ಹೊಸ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಂತರ ಮೂರ್ತಿಯ ಮೆರವಣೆಗೆ ಜೊತೆಗೆ ಶ್ರೀಶೈಲ್ ಜಗದ್ಗುರುಗಳೊಂದಿಗೆ ಕುಂಭಮೇಳ, ಸಕಲ ವಾಧ್ಯ ಮೇಳಗಳೊಂದಿಗೆ ಮೆರವಣೆಗೆ ಜರುಗುವುದು. ನಂತರ ಜರುಗುವ ಪ್ರವಚನದ ಸಾನ್ನಿದ್ಯವನ್ನು ಶ್ರೀಶೈಲ್ ದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸುವರು, ಬೀಳಗಿಯ ಶ್ರೀ ಗುರುಪಾದ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿರುವರು. ಸಂಜೆ ಪ್ರವಚನದ ಸಾನ್ನಿಧ್ಯವನ್ನು ಬಾಗೋಜಿಕೊಪ್ಪದ ಡಾ.ಮುರಘರಾಜೇಂದ್ರ ಶಿವಾಚಾರ್ಯ ಶ್ರೀಗಳು ವಹಿಸಿವರು. ಸಂಜೆ ಪ್ರವಚನ ಜರುಗುವುದು.
. ನ.3 ರಂದು ಲಕ್ಷಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನಗಳ ಉದ್ಘಾಟನೆ ಮತ್ತು ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿಗಳು ವಹಿಸಿವರು.ಹುಣಶ್ಯಾಳ ಪಿ.ಜಿಯ ಶ್ರೀ ನಿಜಗುಣ ದೇವರು, ಮನ್ನಾಪೂರದ ಶ್ರೀ ಲೊಕೇಶ್ವರ ಶ್ರೀಗಳು ಉಪಸ್ಥಿತರಿರುವರು. ಸಂಜೆ ಜರುಗುವ ಪ್ರವಚನದಲ್ಲಿ ಶೇಗುಣಶಿಯ ಡಾ.ಮಹಾಂತಪ್ರಭು ಶ್ರೀಗಳು, ಮರೇಗುದ್ದಿಯ ಶ್ರೀ ಗುರುಪಾದ ಶ್ರೀಗಳು ಉಪಸ್ಥಿತರಿರುವರು.

ನ.4 ರಂದು ಜರುಗಲಿರುವ ಪ್ರಚಾನ ಕಾರ್ಯಕ್ರಮದಲ್ಲಿ ಕಕಮರಿಯ ಶ್ರೀ ಗುರುಲಿಂಗ ಜಂಗಮ ಮಹಾರಾಜರ, ಹೊಸದುರ್ಗ ಭಗೀರಥ ಗುರುಪೀಠ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಜಮಖಂಡಿಯ ಡಾ.ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಗೋಕಾಕ ಶೂನ್ಯ ಸಂಪಾದನೆ ಮಠದ ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ.

ನ.5 ರಂದು ಕೊನೆಯ ದಿನಂದು ರಂಗೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನಗಳ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ನಿಡಶೋಶಿ ದುರದುಂಡೇಶ್ವರ ಸಿದ್ದಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅರಭಾವಿಯ ಗುರುಬಸವಲಿಂಗ ಸ್ವಾಮೀಜಿ, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಶ್ರೀಗಳು, ವೇಮನಾನುನಂದ ಸ್ವಾಮೀಜಿ,ಕವಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾ


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *