Breaking News
Home / ವಿಜಯಪುರ / “ರಮೇಶ, ಎಸ್. ಬಿರಾದಾರ ಅವರ ಸಮಾಜಸೇವೆಗೆ’ಸಿದ್ಧಶ್ರೀ’ರಾಜ್ಯ ಪ್ರಶಸ್ತಿಯ ಗರಿ. “

“ರಮೇಶ, ಎಸ್. ಬಿರಾದಾರ ಅವರ ಸಮಾಜಸೇವೆಗೆ’ಸಿದ್ಧಶ್ರೀ’ರಾಜ್ಯ ಪ್ರಶಸ್ತಿಯ ಗರಿ. “

Spread the love

ಸಮಾಜ ಸೇವೆ ಎಂದರೆ, ಸಮಾಜದ ಕಲ್ಯಾಣಕ್ಕಾಗಿ ಮಾಡುವ ನಿಸ್ವಾರ್ಥ ಕಾರ್ಯ. ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಸಹಾಯ ಮಾಡುವುದು, ಪರಿಸರ ಸಂರಕ್ಷಣೆ, ರಕ್ತದಾನ, ಶಿಕ್ಷಣ ಪ್ರಚಾರ, ಆರೋಗ್ಯ ಜಾಗೃತಿ ಹೀಗೆ ಅನೇಕ ಕಾರ್ಯಗಳು ಸಮಾಜ ಸೇವೆಯ ಭಾಗ. ಸಮಾಜ ಸೇವೆಯ ಮೂಲಕ ಜನರಲ್ಲಿ ಸಹಕಾರ, ಸಹಾನುಭೂತಿ, ಬಾಂಧವ್ಯ ಬೆಳೆಸಬಹುದು. ಇಂತಹ ಸೇವೆಯು ವ್ಯಕ್ತಿತ್ವ ವಿಕಾಸಕ್ಕೂ ಕಾರಣವಾಗುತ್ತದೆ.

ಸರ್ಕಾರದ ಜೊತೆಗೆ ಸಾಮಾನ್ಯ ನಾಗರಿಕರೂ ಸಹ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು. ಸಮಾಜ ಸೇವೆ ಎಂದರೆ ಕೇವಲ ಹಣ ಕೊಡುವುದಲ್ಲ, ಸಮಯ, ಶ್ರಮ, ಜ್ಞಾನ ಹಂಚಿಕೊಳ್ಳುವುದೂ ಸಹ ಸೇವೆಯೇ. ಇಂತಹ ಸೇವೆ ಮಾಡುವವರು ಸಮಾಜದಲ್ಲಿ ಮಾದರಿಯಾಗುತ್ತಾರೆ.

ಹಾಗೆಯೇ ಚಿಕ್ಕವಯಸ್ಸಿನಿಂದಲೇ ಈ ಮೇಲಿನ ಎಲ್ಲಾ ಸೇವೆಯಲ್ಲಿ ಸ್ವಯಂ ಇಚ್ಚಾಶಕ್ತಿಯಿಂದ ಸ್ವಂತ ಖರ್ಚಿನಲ್ಲಿ ಬಡಮಕ್ಕಳಿಗೆ, ಅನಾಥ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತ ಹಾಗೂ ಆಂಗ್ಲ ಭಾಷೆಯ ಸಂಪನ್ಮೂಲ ವ್ಯಕ್ತಿಯಾಗಿ,ಧಾರವಾಡ, ಹುಬ್ಬಳ್ಳಿ, ವಿಜಯಪುರ,ಅಫ್ಜಲ್ ಪುರ, ಹಾವೇರಿ, ಬಾಗಲಕೋಟೆ ಗಳಲ್ಲಿ 34 ಬೇಸಿಗೆ ಶಿಬಿರದಲ್ಲಿ ಮತ್ತು 48 ಶೈಕ್ಷಣಿಕ ಕಾರ್ಯಾಗಾರಗಳನ್ನು ಉಚಿತವಾಗಿ ನಡೆಸಿಕೊಟ್ಟಂತಹ ಕೀರ್ತಿ ಮೂಡಲಗಿ ಶಿಕ್ಷಣ ಸಂಸ್ಥೆಯ, ಶ್ರೀ. ಶಿವಬೋಧ ರಂಗ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿರುವ ಶ್ರೀ. ರಮೇಶ. ಎಸ್. ಬಿರಾದಾರ ಇವರಿಗೆ ಸಲ್ಲುತ್ತದೆ.

ಶ್ರೀಯುತರು ನವೆಂಬರ್ 01,1994 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ತಂದೆ ಶಿವಾನಂದ ಮತ್ತು ತಾಯಿ ಮಹಾದೇವಿ
ಇವರ ಮಡಿಲಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು, ಯಾವತ್ತೂ ಯಾರ ಮುಂದೆಯೂ ತಮ್ಮ ದುಃಖವನ್ನು ತೋಡಿಕೊಳ್ಳದೆ, ಸದಾ ಹಸನ್ಮುಖಿಯಾಗಿ, ತಾವು ನಗುತ್ತಾ, ಮತ್ತೊಬ್ಬರನ್ನು ನಗಿಸುತ್ತಾ ಇರುವ ಇವರು ಬಡತಾಯಿಯ ಮಡಿಲಲ್ಲಿ, ಹುಟ್ಟಿದ ಊರಿನಲ್ಲೇ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸ ವನ್ನು ಧಾರವಾಡದಲ್ಲಿ ಮುಗಿಸಿ ಅಲ್ಲಿಯೇ ಪ್ರಶಿಕ್ಷಣಾರ್ಥಿಯಾಗಿದ್ದಾಗಲೇ ಬೋಧನಾ ಸೇವೆಯನ್ನು ಆರಂಭಿಸಿದರು.ಪ್ರಸ್ತುತವಾಗಿ ತಮ್ಮ 11 ನೇ ವರ್ಷದ ಬೋಧನಾ ಅನುಭವದಲ್ಲಿದ್ದಾರೆ.

ಧಾರವಾಡದಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಮತ್ತು ಕರಿಯರ್ ಅಕಾಡೆಮಿಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ,ವೃತ್ತಿಯಲ್ಲಿ ಸಾಕಷ್ಟು ಅನುಭವವನ್ನು ಪಡೆದು ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ನೋವುಗಳನ್ನು ಗಮನದಲ್ಲಿಟ್ಟುಕೊಂಡು ಅವರು ಸಮಾಜ ಸೇವೆಗೆ ದುಮುಕಿದರು.

ಸಮಾಜ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ, ಚೇತನ ಫೌಂಡೇಶನ್ (ರಿ) ಧಾರವಾಡ, ಇವರು ‘ಸಿದ್ಧಶ್ರೀ’ ರಾಜ್ಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿರುತ್ತಾರೆ.

ಇವರು ಈ ಎರಡು ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಕ್ತದಾನ ಮಾಡುವುದಲ್ಲದೆ, ಉತ್ತಮ ನಿರೂಪನಾಕಾರರು, ವಾಗ್ಮಿಗಳೂ ಹೌದು ಮತ್ತು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿದ್ದಾರೆ, ಇದನ್ನು ಗಮನಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಇವರಿಗೆ ಮೂಡಲಗಿ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಘೋಷಿಸಿ, ಮಕ್ಕಳ ಸಾಹಿತ್ಯದಲ್ಲಿ ಇನ್ನಷ್ಟು ಜವಾಬ್ಧಾರಿಯನ್ನು ಹೆಚ್ಚಿಸಿದೆ.

ಶ್ರೀಯುತರ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಸಾಹಿತ್ತಿಕ ಸೇವೆ ಇನ್ನಷ್ಟು ಆಕಾಶದೇತ್ತರಕ್ಕೆ ಏರಲಿ, ಇವರಿಗೆ ಇನ್ನೂ ಸಹಾಯ, ಸಹಕಾರ ಮತ್ತು ಮಕ್ಕಳಿಗೆ ಜ್ಞಾನ ನೀಡುವಂತ ಶಕ್ತಿ ಆ ದೇವರು ಕೊಡಲಿ ಇನ್ನಷ್ಟು ಪ್ರಶಸ್ತಿಗಳು ಅವರ ಹೆಗಲೇರಲಿ ಎಂದು ನಾವೆಲ್ಲರೂ ಆಶೀಸೋಣ.

ಲೇಖಕರು :
ಶ್ರೀ. ಎಸ್. ಎಸ್. ಕುರಣೆ
ಚಿತ್ರಕಲಾ ಶಿಕ್ಷಕರು,
ಮೂಡಲಗಿ.

ಲೇಖಕರು :     ಶ್ರೀ. ಎಸ್. ಎಸ್. ಕುರಣೆ

               ಚಿತ್ರಕಲಾ ಶಿಕ್ಷಕರು,

              ಮೂಡಲಗಿ.

Spread the love

About Ad9 Haberleri

Leave a Reply

Your email address will not be published. Required fields are marked *