ವಿಜಯಪುರ ಜಿಲ್ಲೆಯ ಮಾನವಿ ಯಲ್ಲಿ ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಮಾನವಿ ವತಿಯಿಂದ ನಡೆಸಿದ ಆನ್ಲ್ಯೆನ್ ಸ್ಪರ್ಧೆ ರಾಷ್ಟ್ರ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಗಾನ ಕೋಗಿಲೆ ಸ್ಪರ್ಧೆ ನಲ್ಲಿ ವರ್ಷಾ ಸಚೀನ್ ಸೋನಾರ್ ಅವರು ತಮ್ಮ ಸುಂದರವಾದ ಕಂಠದಿಂದ ಸ್ಪರ್ಧೆ ಮಾಡಿ ಸುಂದರವಾಗಿ ಹಾಡು ಹಾಡಿ ಜನರ ಮೆಚ್ಚುಗೆ ಪಡೆದಿದ್ದಾರೆ.
ಇವರು ಹಾಡು ಕೇಳುತ್ತಿದ್ದರೆ ಕೋಗಿಲೆ ಕಂಠ ದಂತೆ ಕೇಳುವ ಇವರ ಧ್ವನಿ ಯನ್ನು ಕೇಳಿ ತೀರ್ಪು ಗಾರರು ಇವರಿಗೆ ರಾಷ್ಟ್ರ ಮಟ್ಟದ ಲತಾ ಮಂಗೇಶ್ಕರ್ ಪ್ರಶಸ್ತಿ ನೀಡಲಿದ್ದಾರೆ.
ಈದೆ ಏಪ್ರಿಲ್ 10ರಂದು ದೇವದುರ್ಗದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ವರ್ಷಾ ಸಚೀನ್ ಸೋನಾರ್ ಅವರಿಗೆ ಈ ಪ್ರಶಸ್ತಿ ದೊರಕಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.