ರಾಮದುರ್ಗ: ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಮಾರ್ಪಡಿಸುವಂತೆ ಮತ್ತು ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಶಾಲೆಯ ಮುಖ್ಯ ಶಿಕ್ಷಕ ಎಂ.ಎ.ಬನ್ನೂರ ಅವರು ಮನವಿ ಸಲ್ಲಿಸಿದರು.
ಶುಕ್ರವಾರದಂದು ತೊಂಡಿಕಟ್ಟಿ ಶಾಲಾ ಆವರಣದಲ್ಲಿ ಜರುಗಿದ ರಾಕೇಶ ಚಿಕ್ಕೂರ ಅವರ ಮಧುವೆಗೆ ಆಗಮಿಸದ ಸಚಿವ ಗೋವಿಂದ ಕಾರಜೋಳ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತೊಂಡಿಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಸರಕಾರಿ ಪ್ರೌಢ ಶಾಲೆಗಳಿರುವುದಿಲ್ಲ. ಶಾಲೆಯಲ್ಲಿ ೨೦೦೩ ರಿಂದ ಇಲ್ಲಿಯವರೆಗೆ ೮ ನೇ ವರ್ಗ ಇರುವುದರಿಂದ ೯ ಮತ್ತು ೧೦ ನೇ ವರ್ಗಕ್ಕೆ ಓದಲು ಪರ ಊರಿಗೆ ಹೋಗುತಿದ್ದು ಹಾಗೂ ಅನೇಕ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗುತ್ತಿದಾರೆ. ತೊಂಡಿಕಟ್ಟಿ ಗ್ರಾಮದಲ್ಲಿ ಒಂದು ಹಿಂದುಳಿ ವರ್ಗಗಳ ವಸತಿ ನಿಲಯ, ಶಾಲೆಗೆ ಅವಶಕ ಇರುವ ನಾಲ್ಕು ಕೊಠಡಿಗಳು ಮತ್ತು ಭೋಜನಾಲಯ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ಮನವಿ ನೀಡಿದರು.
ಈ ಸಮಯದಲ್ಲಿ ಶಾಲೆಯ ಶಿಕ್ಷಕರಾದ ಪಿ.ಟಿ.ತೋಳಮಟ್ಟಿ, ಎಸ್.ಆಯ್.ಪಾಟೀಲ, ಬಿ.ಬಿ.ಒಡೇಯರ, ಕೆ.ಎಂ.ಹಿರೇಮಠ ಮತ್ತಿತರರು ಇದ್ದರು.