Breaking News

ತೊಂಡಿಕಟ್ಟಿ ಗ್ರಾ.ಪಂ ಅಧ್ಯಕ್ಷರಾಗಿ ಚಿಕ್ಕೂರ ಅವಿರೋದ ಆಯ್ಕೆ

Spread the love


ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಾಣೆಯಲ್ಲಿ ಅಧ್ಯಕ್ಷರಾಗಿ ರಾಕೇಶ ದ್ಯಾವಪ್ಪ ಚಿಕ್ಕೂರ ಹಾಗೂ ಉಪಾಯಕ್ಷರಾಗಿ ಶಾಂತವ್ವ ಗುರುಪಾದ ಅಮ್ಮೊಜಿ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮದುರ್ಗದ ನಿರಾವರಿ ಇಲಾಖೆಯ ಅಧಿಕಾರಿ ಗಂಗಾಧರ ಕೋಮನವರ ತಿಳಿಸಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೊಂಡಿಕಟ್ಟಿಯ ರಾಕೇಶ ಚಿಕ್ಕೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜಗುಪ್ಪಿಯ ಶಾಂತವ್ವ ಅಮ್ಮೊಜಿ ಅವರು ಮಾತ್ರ ನಾಮಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಾಮಕೃಷ್ಣ ದೇಸಾಯಿ, ಚೈತ್ರಾ ಅತ್ತಾಲಟ್ಟಿ, ಲಕ್ಷ್ಮೀ ಲೆಂಕೆನ್ನವರ,ಸುಶೀಲವ್ವ ಪೂಜೇರಿ, ಮಹಾದೇವಿ ಮಾದರ, ಭೀಮಪ್ಪ ಮಾದರ, ದ್ಯಾವಕ್ಕ ಬಂತಿ, ಪತ್ರೆಪ್ಪ ನರಗುಂದ ಪತ್ರೆಪ್ಪ ಕೊಪ್ಪದ, ಪಿಡಿಒ ರಾಮನಗೌಡ ಪಾಟೀಲ, ಕಾರ್ಯದಶಿ ಮಂಜುಳಾ ಪಾಟೀಲ, ಗಣ್ಯರಾದ ವೆಂಕಣ್ಣ ಸೊಗನಾದಗಿ, ಸುಭಾಸ ಹಲಗಲಿ, ರುದ್ರಪ್ಪ ತೋರನಗಟ್ಟಿ ಮತ್ತಿತರರು ಇದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸದಸ್ಯರು ಮತ್ತು ಗಣ್ಯರು ಹೂ ಮಾಲೆ ಹಾಕಿ ಅಭಿನಂದಿಸಿದರು.


Spread the love

About Ad9 News

Check Also

ತೊಂಡಿಕಟ್ಟಿ ಶಾಲೆಗೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ

Spread the love  ರಾಮದುರ್ಗ: ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಮಾರ್ಪಡಿಸುವಂತೆ ಮತ್ತು …

Leave a Reply

Your email address will not be published. Required fields are marked *