Breaking News
Home / ಮೂಡಲಗಿ / ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ : ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ

ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ : ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ

Spread the love

 

ಮೂಡಲಗಿ : ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ತಾಲೂಕಾ ಪಂಚಾಯತ್ ಮೂಡಲಗಿ ಗ್ರಾಮ ಪಂಚಾಯತ ವಡೇರಹಟ್ಟಿ, ಪೂರ್ವಿ ಕ್ರೀಡಾ ಮತ್ತು ಸಾಂಸ್ಕøತಿಕ ಯುವ ಸಂಘ ವಡೇರಹಟ್ಟಿ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಲಗಿ ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಣ ್ಣರಲಿ ಗಂಡಿರಲಿ ಮನೆಗೊಂದು ಕ್ರೀಡಾಪಟು ಇರಲಿ. ಆಟದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ದಿನನಿತ್ಯದ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.


ಬೆಳಗಾವಿ ಜಿಲ್ಲಾ ಅಮೆಚ್ಚುಯರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಮಾತನಾಡಿ ಇನ್ನಿತರ ಕ್ರೀಡೆಗಳಂತೆ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ಚಕ್ಕಡಿ ಹಾಗೂ ಕುಸ್ತಿ ಕ್ರೀಡೆಗಳಿಗೂ ಕೂಡ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು, ಸರಕಾರವು ಕೂಡ ಇಂಥ ಗ್ರಾಮೀಣ ಕ್ರೀಡೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಬೆಳೆಸಲು ಕ್ರೀಡಾ ಇಲಾಖೆ ಹಾಗೂ ನಮ್ಮ ಭಾಗದ ಶಾಸಕರು ಹಾಗೂ ಕೆಎಂಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಕೊಡುಗೆ ಅಪಾರವಾಗಿದೆ ಒಂದು ಕಾರ್ಯಕ್ರಮ ಆಗಬೇಕಾದರೆ ಊರಿನ ಗುರುಹಿರಿಯರ ಸಹಕಾರ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.ಶಿಕ್ಷಕ ಚಂದ್ರಕಾಂತ ಮೋಟೆಪ್ಪನವರ ಮಾತನಾಡಿ ಈ ವರ್ಷ ತಾಲೂಕಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಜರಗಿದಂತೆ, ಇಲಾಖೆ ಹಾಗೂ ಶಾಸಕರು ಸಹಯೋಗದಿಂದ ಬರುವ ವರ್ಷ ಕೂಡ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟವನ್ನು ನಮ್ಮ ಗ್ರಾಮದ ಹಿರಿಯರ ಸಹಕಾರದಿಂದ ಆಯೋಜಿಸುತ್ತೇವೆ ಎಂದು ಹೇಳಿದರು.ಗ್ರಾಮದ ಮುಖಂಡರಾದ ಅಡಿವೆಪ್ಪ ಹಾದಿಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ಮುರಳಿ ವಜ್ರಮಟ್ಟಿ, ಖಾನಪ್ಪ ಹೊಳಕರ, ಶಾಸಕರ ಆಪ್ತ ಕಾರ್ಯದರ್ಶಿ ಅಬ್ಧುಲ್ ಮಿರ್ಜಾನಾಯಕ್, ಲಕ್ಷ್ಮಣ ಮಳ್ಳಿಒಡೆಯರ್, ಪರಸಪ್ಪ ಸಾರಪೂರ, ವಿಠ್ಠಲ್ ಗೀಡೊಜಿ, ಹೊಳೆಪ್ಪ ಹಾದಿಮನಿ, ಗೋಪಾಲ ಕುದರಿ, ಸಿದ್ದಲಿಂಗ ಗೀಡೊಜಿ, ಶಿವಾನಂದ್ ಗುಡಸಿ, ಬಸವರಾಜ್ ಜಕ್ಕಣ್ಣವರ, ಗೂಳಪ್ಪ ವಿಜಯನಗರ, ರುದ್ರಗೌಡ ಪಾಟೀಲ್, ಬಣಪ್ಪ ಒಡೆಯರ್, ಬಾಲಚಂದ್ರ ಪೂಜೇರಿ, ರೇಬ್ಬೊಜಿ ಮಳ್ಳಿಒಡೆಯರ, ನಾರಾಯಣ ತೋಟಗಿ, ಮಾರುತಿ ಮದ್ರಾಸಿ, ಮಾರುತಿ ಬೆಂಕೆಪ್ಪಗೊಳ, ಸಿದ್ದಪ್ಪ ಪಡಚಿ, ವೆಂಕಣ್ಣ ಕೊಂಕಣ , ಶಿವನಗೌಡ ನಾಯಕ, ಬಸು ಬಾಪುಕುರಿ, ಪಾಂಡು ದೊಡಮನಿ, ಪಾಂಡು ಮಣ ್ಣಕೇರಿ ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಗ್ರಾಮಸ್ಥರು, ಹಾಗೂ ಕಾರ್ಯಕ್ರಮ ಸಂಘಟಕರು ಉಪಸ್ಥಿತರಿದ್ದರು.ರಾಘವೇಂದ್ರ ದೊಡವಾಡ ಸ್ವಾಗತಿಸಿದರು, ಶೈಲಾ ಕೋಕರೆ ನಿರೂಪಿಸಿದರು, ರವಿ ಪೂಜೇರಿ ವಂದಿಸಿದರು.


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *