ವಿಶಿಷ್ಟವಾದ ಹುಟ್ಟುಹಬ್ಬ ಆಚರಿಸಿಕೊಂಡ ಸಂಕೇಶ್ವರ ಫ್ರೇಂಡ್ಸ ಫೌಂಡೇಶನ್ ಸದಸ್ಯ : ಲಾಡಜಿ ಮುಲ್ತಾನಿ
ಹುಟ್ಟು ಹಬ್ಬದ ಸಂಧರ್ಭ ಪಾರ್ಟಿ , ಪ್ರವಾಸ ಹೀಗೆ ದುಂದು ವೆಚ್ಚ ಮಾಡುವವರನ್ನ ನೋಡಿದ್ದೇವೆ ಆದರೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಸಂಕೇಶ್ವರ ಫ್ರೇಡ್ಸ ಫೌಂಡೇಶನ್ ನ ಸದಸ್ಯರು ವಿಭಿನ್ನವಾಗಿ ಇದ್ದಾರೆ
ಹಣವನ್ನು ಮೋಜು ಮಸ್ತಿಗೆ ಹಾಳು ಮಾಡದೇ ಅದಕ್ಕೆ ಇನ್ನೂ ಒಂದಷ್ಟು ಹಣವನ್ನು ಸೇರಿಸಿ ಸಮಾಜದಲ್ಲಿರುವ ಅಶಕ್ತರಿಗೆ ಕೊಡುವುದು ಸಂಕೇಶ್ವರ ಫ್ರೇಡ್ಸ ಫೌಂಡೇಶನ್ ನ ಸದಸ್ಯರ ಉದ್ದೇಶವಾಗಿದೆ.
ಸಂಕೇಶ್ವರ ಫ್ರೆಂಡ್ಸ ಫೌಂಡೇಷನ್ ಸದಸ್ಯ ಲಾಡಜಿ ಮುಲ್ತಾನಿ ಇವರ ಹುಟ್ಟು ಹಬ್ಬದ ಅಂಗವಾಗಿ ಗುರುವಾರ ದಿ.16 ರಂದು ಸಂಕೇಶ್ವರದ ವೆಂಕಟೇಶ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ ಪ್ರತಿಭಾವಂತ ವಿಧ್ಯಾರ್ಥಿ ಭರತೇಶ್ ಪಿ. ಎಂಬ ಯುವಕನನ್ನು ಗುರುತಿಸಿ ಫೌಂಡೇಶನ್ ನ ಎಲ್ಲ ಸದಸ್ಯರು ಸೇರಿ ಬುಕ್, ಪೆನ್ಸಿಲ್, ಪೆನ್, ಬಟ್ಟೆ ವಿತರಿಸಿದಾರೆ. ಈ ವಿದ್ಯಾರ್ಥಿ ಒಬ್ಬ ಬಡ ಕುಟುಂಬದವನಾಗಿದ್ದು ಈತನ ತಾಯಿ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕ ಪ್ರತಿಭಾವಂತ ನಾಗಿದ್ದು ಕಾರಣ, ಆತನಿಗೆ ಬ್ಯಾಗ್ , ಬುಕ್, ಬಟ್ಟೆ, ಹೀಗೆ ಕಲಿಕಾ ಸಾಮಗ್ರಿಗಳನ್ನು ನೀಡಿ ಯುವಕನ ವಿಧ್ಯಾಭ್ಯಾಸಕ್ಕೆ ನೇರವಾಗಿ, ಫೌಂಡೇಶನ್ ಸದಸ್ಯ ಲಾಡಜಿ ಮುಲ್ತಾನಿ ಅವರ ಹುಟ್ಟು ಹಬ್ಬವನ್ನು ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದಾರೆ.
ಈ ಸಂಧರ್ಬದಲ್ಲಿ ಮಹೇಶ ಮಾಳಗಿ, ರವಿ ಶೇಟ್ಟಿಮನಿ, ಉಮೇಶ್ ಗೊಟುರೆ, ಪ್ರಭಾಕರ ಪಾಟೀಲ, ಕುಮಾರ ಸಂಸುದ್ದಿ, ವಿನಾಯಕ ಜರಳಿ, ದಯಾನಂದ ಆಲೂರೆ ಶಬ್ಬಿರ್ ಫೀರಜಾದೆ ಇದ್ದರು.