Breaking News

ವಸತಿ ಯೋಜನೆ ಅವಧಿ ವಿಸ್ತರಣೆಯಾಗಲಿ: ರಮೇಶ ಕತ್ತಿ

Spread the love

ವಸತಿ ಯೋಜನೆ ಅವಧಿ ವಿಸ್ತರಣೆಯಾಗಲಿ: ರಮೇಶ ಕತ್ತಿ

ಸಂಕೇಶ್ವರ : ರಾಜ್ಯ ಸರ್ಕಾರ ವಿವಿಧ ಯೋಜನೆಯಡಿ ಮಂಜೂರಾತಿ ನೀಡಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಮನೆಗಳ ಕಾರ್ಯಾರಂಭ ಮಾಡಲು ಮಾರ್ಚ್ 10 ಹಾಗೂ 15ರ ಗಡುವು ವಿಧಿಸಿದ್ದು, ಈ ಅವಧಿಯನ್ನು ಕೂಡಲೇ ಏ.30ರವರೆಗೆ ವಿಸ್ತರಣೆ ‌ಮಾಡಬೇಕು ಎಂದು‌ ಮಾಜಿ ಸಂಸದ ರಮೇಶ ಕತ್ತಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು,‌ ಗಡಿಜಿಲ್ಲೆ ಈಗಾಗಲೇ ‌ನೆರೆಯಿಂದ ನಲುಗಿ ಹೋಗಿದ್ದು ಇಂತಹ ಸಂದರ್ಭದಲ್ಲಿ ವಸತಿ ಯೋಜನೆಯಡಿ ಇಂತಹ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವದರಿಂದ 2013-14 ರಿಂದ.          2017-18ರವರೆಗೆ ಮಂಜೂರಾತಿಯಾಗಿರುವ ಮನೆಗಳನ್ನು ಆರಂಭಿಸುವುದು ಕಷ್ಟ ಈ‌ ಕುರಿತು ಸರಕಾರ ಪರಿಶೀಲಿಸಿ ಕ್ರಮ ಜರುಗಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶ ಜನ ತುರ್ತು ಅವಧಿಯಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಅವಧಿ ವಿಸ್ತರಣೆ ಮಾಡುವಂತೆ ಹಲವರು ನನ್ನ ಬಳಿ‌ ಮನವಿ‌ ಮಾಡಿಕೊಂಡಿದ್ದು, ಈ ಅವಧಿ ವಿಸ್ತರಣೆ ಮಾಡುವಂತೆ ವಸತಿ‌ ಸಚಿವರಿಗೆ‌ ಮನವಿ ಮಾಡುತ್ತೇನೆ ಎಂದರು.


Spread the love

About Ad9 News

Check Also

ಪ್ರಧಾನಿ ನರೇಂದ್ರ ಮೋದಿಯವರ ನವ-ಕರ್ನಾಟಕ ಸಂಕಲ್ಪ ಸಮಾವೇಶ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಕುಡಚಿ ಕ್ಷೇತ್ರದ ಹಾರುಗೇರಿ ಕ್ರಾಸ್ ಯಬರಟ್ಟಿ ಹತ್ತಿರ ನಡೆದ …