Breaking News

ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯ ಜೊತೆಗೆ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

Spread the love


ಮೂಡಲಗಿ: ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯ ಜೊತೆಗೆ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ 2020ರ ಪೂರ್ವ ಸಿದ್ಧತೆಯ ಕುರಿತು ಪ್ರೇರಣಾಧಾಯಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಲಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದು ವಿದ್ಯಾರ್ಥಿಗಳು ಪಾಲಕರು ಆತಂಕ ಪಡುವ ಅವಶ್ಯಕತೆ ಇರುವದಿಲ್ಲ. ವಿದ್ಯಾರ್ಥಿಗಳಿಗೆ ಓದಿರುವ ವಿಷಯಗಳ ಕುರಿತು ಉಜಳಣ ಕಾರ್ಯವಾಗಬೇಕು. ಕಾಲಕಾಲಕ್ಕೆ ಪರೀಕ್ಷಾ ಮಂಡಳಿಯ ನಿರ್ಧೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವದು. ಕಲಿಕೆಯಲ್ಲಿ ಕನಿಷ್ಠ ಗತಿಯಲ್ಲಿರುವವರಿಗೆ ಕನಿಷ್ಠ ಪಾಸಿಂಗ್ ಪ್ಯಾಕೇಜ್ ನೀಡಬೇಕು ಎಂದರು.

ಪ್ರತಿ ಪರೀಕ್ಷಾ ಕೇಂದ್ರಗಳು ಸಿಸಿ ಕ್ಯಾಮರ ಕಡ್ಡಾಯವಾಗಿದೆ. ಮೂಲಭೂತ ಸೌಲಭ್ಯಗಳಾದ ಸೌಚಾಲಯ, ಕುಡಿಯುವ ನೀರು, ಆಸನ, ಸ್ಥಳೀಯ ಆರೋಗ್ಯ ಕೇಂದ್ರ, ಬಸ್ ವ್ಯವಸ್ಥೆ, ಪೊಲೀಸ್ ಬಂದೋ ಬಸ್ತಿ, ಹೆಸ್ಕಾಂ ಇಲಾಖೆಗಳಿಂದ ಅಗತ್ಯ ನೇರವನ್ನು ಪಡೆಯುವದು. ಮೊದಲ ಉಜಳಣೆ ಸಪ್ತಾಹವು ಮಾ.11 ರಿಂದ 17 ರವಗೆ, ಎರಡನೇಯದು 18 ರಿಂದ 24 ರವರೆಗೆ ಜರುಗಿಸಬೇಕು. ಆಡಳಿತಾತ್ಮಕವಾಗಿ ಕೋರೊನಾ ವೈರಸ್ ಬಗ್ಗೆ ಮುನ್ನಚ್ಚರಿಕೆ ಕ್ರಮಗಳು, ಮೂಲಭೂತ ಸೌಲಭ್ಯಗಳ ಮಾಹಿತಿ, ಸೂಕ್ತ ಕ್ರಿಯಾಯೋಜನೆ, ಪ್ರವಾಹ ಮಳೆಯಿಂದ ಹಾನಿಗೊಳಗಾಗಿರುವ ಶಾಲೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ದೈಹಿಕ ಶಿಕ್ಷಣಾಧಿಕಾರಿ ಎಸ್.ಎ ನಾಡಗೌಡರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಯ ನಿಯಮಗಳು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಕೇಂದ್ರಗಳ ತಯಾರಿ ಕರಿತು ವಿವರಿಸಿದರು.

ಸಭೆಯಲ್ಲಿ ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್, ಮೇಘಾ ಸಂಸ್ಥೆ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರೌಢ ಶಾಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಎಲ್ ಆಯ್ ಕೊಳವಿ, ನೌಕರರ ಹಾಗೂ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಸುಭಾಸ ಭಾಗೋಜಿ, ಬಿ.ಆರ್.ಪಿಗಳಾದ ಜಿ.ಆರ್ ಪತ್ತಾರ, ಬಡಿಗೇರ ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಸಹಾಯಕರು, ಕಸ್ಟೋಡಿಯನ್‍ಗಳು, 6 ವಿಷಯಗಳ ಶಿಕ್ಷಕರು ಉಪಸ್ಥಿತರಿದ್ದರು.

ವರದಿ: ಕೆ.ವಾಯ್ ಮೀಶಿ


Spread the love

About Ad9 News

Check Also

ಅಯ್ಯಪ್ಪಸ್ವಾಮಿ ಭಕ್ತರಿಗೆ ರೆಲ್ವೆಯಲ್ಲಿ ಆಸನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಮನವಿ

Spread the love ಬೆಳಗಾವಿ: ಶಬರಿಮಲೆ ಯಾತ್ರೆ ಮಾಡುವ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಹಾಗೂ ಭಕ್ತರಿಗೆ ಪುನಾ-ಏರ್ನಾಕುಲಂ ಸಂಚರಿಸುವ ರೈಲ್ವೆಯಲ್ಲಿ …