Breaking News
Home / ಮೂಡಲಗಿ / ಕೃಷಿ ಅಧಿಕಾರಿಗಳ ತಂಡದಿಂದ ರಸಗೊಬ್ಬರ ಮಳಿಗೆ ಮೇಲೆ ದಾಳಿ

ಕೃಷಿ ಅಧಿಕಾರಿಗಳ ತಂಡದಿಂದ ರಸಗೊಬ್ಬರ ಮಳಿಗೆ ಮೇಲೆ ದಾಳಿ

Spread the love

ಮೂಡಲಗಿ: ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಜೈ ಜೀನೇಂದ್ರ ಫರ್ಲಿಲೈಜರ್ಸ್ ರಸಗೊಬ್ಬರ ಮಳಿಗೆ ಮೇಲೆ ಶುಕ್ರವಾರದಂದು ಕೃಷಿ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ ರಸಗೊಬ್ಬರ ಮಳಿಗೆ ಬೀಗ ಹಾಕಿದ್ದಾರೆ.

ರಸಗೊಬ್ಬರ ಮಳಿಗೆ ಮಾಲೀಕರು ಯೂರಿಯಾ ರಸಗೊಬ್ಬರವನ್ನು ಎಮ್‍ಆರ್‍ಪಿಕ್ಕಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ರೈತರು ಕೃಷಿ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಮಾಲೀಕಿನಿಗೆ ಸ್ಟಾಪ್ ಸೇಲ್ ನೋಟಿಸ್ ನೀಡಿ ಮಳಿಗೆಗೆ ಬೀಗ ಜಡದಿದ್ದಾರೆ.

ಇದೇ ವೇಳೆ ಗೋಕಾಕ-ಮೂಡಲಗಿ ತಾಲೂಕಗಳ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್ ರೈತರ ಜೊತೆ ಮಾತನಾಡಿ, ಯಾವುದೇ ರಸಗೊಬ್ಬರ ಮಳಿಗೆ ಮಾಲೀಕರು ಎಮ್‍ಆರ್‍ಪಿಕ್ಕಿಂತಲೂ ನೀಡಬಾರದು, ಕಡ್ಡಾಯವಾಗಿ ಮಳಿಗೆಗಳಲ್ಲಿ ದರಪಟ್ಟಿ, ಸಂಗ್ರಹಣ ಪಟ್ಟಿ, ಪರವಾನಿಗೆಯನ್ನು ಸಾರ್ವಜನಿಕರಿಗೆ ಕಾಣುವಂತೆ ತೂಗು ಹಾಕಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ದೂರುಗಳು ಬಂದರೆ ಪರವಾನಿಗೆಯನ್ನು ಖಾಯಂ ರದ್ದು ಪಡಿಸಲಾಗುವುದು ಎಂದು ಮಾಲೀಕರಿಗೆ ತಿಳಿಸಿದ್ದಾರೆ.

ದಾಳಿಯ ವೇಳೆ ಕೃಷಿ ಅಧಿಕಾರಿಗಳಾದ ಪರಸಪ್ಪ ಹುಲಗಬಾಳ, ಶಂಕರ ಹಳ್ಳದಮನಿ, ಎಸ್.ಬಿ.ಕರಗಣ ್ಣ, ವ್ಹಿ.ಜಿ.ಮೇತ್ರಿ ಇದ್ದರು.


Spread the love

About Ad9 Haberleri

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ- ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್

Spread the loveಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ *ಮೂಡಲಗಿ*: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು …