Breaking News
Home / ಮೂಡಲಗಿ / ಮಾನವೀಯತೆ ಮೆರೆಯುತ್ತಿರುವ ಸಾಮಾಜಿಕ ಕಳಕಳಿಯ ಪೋಲಿಸ ಅಧಿಕಾರಿ

ಮಾನವೀಯತೆ ಮೆರೆಯುತ್ತಿರುವ ಸಾಮಾಜಿಕ ಕಳಕಳಿಯ ಪೋಲಿಸ ಅಧಿಕಾರಿ

Spread the love


ಮೂಡಲಗಿ- ಕೊರೋನಾ ಮಾಹಾ ಮಾರಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಶುಚಿತ್ವ ,ಸಾಮಾಜಿಕ ಅಂತರ, ಮಾಸ್ಕ ದರಿಸುವದು ಅವಶ್ಯವಿದೆ ಎಂದು ಪಿಎಸ್‍ಐ ಎಚ್ ವಾಯ್ ಬಾಲದಂಡಿ ಹೇಳಿದರು.

ಗಂಗಾ ನಗರದ ದೇವದಾಸಿಯರಿಗೆ ಹಾಗೂ ಕಡು ಬಡ ಮಹಿಳಾ ಕೂಲಿಕಾರರಿಗೆ ದಿನ ಬಳಕೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿ, ಕೊರೋನಾ ಬಗ್ಗೆ ಭಯ ಬೇಡ ಮುಂಜಾಗೃತೆ ಇದ್ದರೆ ಸಾಕು. ಕೆಮ್ಮು,ನೆಗಡಿ,ಜ್ವರದಂತಹ ಲಕ್ಷಣ ಇದ್ದರೆ ಕಡೆಗಣ ಸದೆ ವೈಧ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಮನೆಯಲ್ಲೆ ಇರಿ. ಮಕ್ಕಳನ್ನು ಅನಗತ್ಯವಾಗಿ ಹೊರಗೆ ಬಿಡದೆ ಅವರಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಯುವ ಜೀವನ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ಪಿಎಸೈ ಬಾಲದಂಡಿಯವರು ಯಾವುದೆ ಪ್ರಚಾರ ಬಯಸದೆ ಈಗಾಗಲೆ ಪಟ್ಟಣದ ವಿವಿದೆಡೆ ಸಂಕಷ್ಟದಲ್ಲಿರುವಂತಹ ಬಡ ಬಗ್ಗರನ್ನು ಗುರುತಿಸಿ ಸಾಕಷ್ಟು ಕಿಟ್‍ಗಳನ್ನು ವಿತರಿಸಿ ಬಡ ಜನತೆಯ ಕಣ ್ಣೀೀರೊರೆಸುವ ಕಾರ್ಯ ಹಾಗೂ ಕೊರೋನಾ ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಕಳಕಳಿಯ ಅವರ ಕಾರ್ಯ ಶ್ಲಾನೀಯವಾಗಿದೆ ಎಂದರು.

 


Spread the love

About Ad9 Haberleri

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ- ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್

Spread the loveಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ *ಮೂಡಲಗಿ*: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು …