Breaking News
Home / ಬೆಳಗಾವಿ / ಕರುನಾಡು ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬ

ಕರುನಾಡು ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬ

Spread the love

ಮೂಡಲಗಿ: -ಪಟ್ಟಣದಲ್ಲಿ ಮಂಗಳವಾರದಂದು ಕರುನಾಡು ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬವನ್ನು ಗಣ್ಯರೊಂದಿಗೆ ಪರಸ್ಪರರು ಬಣ್ಣ ಎರಚಿ ಸಿಹಿ ಹಂಚಿ ಸಡಗರ ಸಂಭ್ರಮದಿಂದ ಆಚರಿಸಿದರು.

ಸಂಭ್ರಮಾಚರಣೆಯಲ್ಲಿ ಪಿ.ಎಸ್.ಐ.ಮಲ್ಲಿಕಾರ್ಜುನ ಸಿಂಧೂರ ಆಗಮಿಸಿ ಶಿಭಿರಾರ್ಥಿಗಳನ್ನುದ್ದೇಶಿಸಿ ಹಾನಿಕಾರಕ ರಾಸಾಯನಿಕಯುಕ್ತ ಬಣ್ಣ ಉಪಯೋಗಿಸದೆ ಒಣ ಬಣ್ಣ ಮಾತ್ರ ಹಚ್ಚಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಹೇಳಿ ಹಬ್ಬದ ಶುಭಾಶಯ ಹೇಳಿದರು.
ಪ್ರೋ ಸಂಜಯ ಖೋತ ಮಾತನಾಡಿ,ಹಬ್ಬ,ಹರಿದಿನಗಳು ನಾಡಿನ ಸಂಕೃತಿಗಳನ್ನು ಬಿಂಬಿಸುತ್ತವೆ ನಿತ್ಯದ ಜಂಜಾಟಿನ ಬದಿಕಿನಲ್ಲಿ ಕೊಂಚವಾದರೂ ನೆಮ್ಮದಿಯ ಜೀವನ ಕಳೆಯಲು ಹಬ್ಬಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ ಆದ್ದರಿಂದ ಎಲ್ಲರೂ ಒಟ್ಟುಗೂಡಿ ಇಂತಹ ಹಬ್ಬಗಳನ್ನು ನಾವೆಲ್ಲ ಸಹಬಾಳ್ವೆಯಿಂದ ಆಚರಿಸುವುದು ಸಂತಸದ ವಿಷಯ ಎಂದರು.

ಪುರಸಭೆ ಮಾಜಿ ಉಪಾದ್ಯಕ್ಷ ರವೀಂದ್ರ ಸೋನವಾಲ್ಕರ ಮಾತನಾಡಿ,ಈಗ ಪರೀಕ್ಷಾ ಸಮಯವಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ,ತೊಂದರೆಯಾಗದಂತೆ ಮೈದಾನದಲ್ಲಿ ಹಬ್ಬ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ತಾಲೂಕಾ ಕ.ಸಾ.ಪ.ಅದ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹಬ್ಬದ ಶುಭಾಶಯ ಕೋರಿ,ನಗರದಲ್ಲಿ ಜರುಗುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೆಳನ ಶನಿವಾರ ಮಾ.14 ರಂದು ಜರುಗಲಿದ್ದು ನಗರದ ಅಂದ ಹೆಚ್ಚಿಸಲು ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಲು ಸಲಹೆ ನೀಡಿ ಪ್ರತಿಯೊಬ್ಬರು ಈ ಸಮ್ಮೇಳದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಶ್ವಿಗೊಳಿಸಲು ವಿನಂತಿಸಿದರು.

ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಯಾರಿಗೂ ಯಾವದೇ ರೀತಿಯ ತೊಂದರೆಗಳಾಗದಂತೆ ಪ್ರಶಿಕ್ಷಣಾರ್ಥಿಗಳಿಗೆ ಹುರಿದುಂಬಿಸಲು ಹಬ್ಬದ ಆಚರಣೆಯ ಜೊತೆಗೆ ವಿವಿಧ ಬಗೆಯ ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಗಣ್ಯರಾದ ಮಲ್ಲಿಕಾರ್ಜುನ ಬಳಿಗಾರ, ನೂರಾರು ಶಿಬಿರಾರ್ಥಿಗಳು ಇದ್ದರು.

ವರದಿ:ಕೆ.ವಾಯ್ ಮೀಶಿ


Spread the love

About Ad9 Haberleri

Check Also

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

Spread the loveಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ …