ಮುಧೋಳ: ದಿನದ 4 ಘಂಟೆ ಅಗತ್ಯ ವಸ್ತುಗಳು ಮತ್ತು ಕಿರಾಣಿ, ತೆರೆಯಲು ಜಿಲ್ಲಾ ಆಡಳಿತ ಅನುಮತಿ
ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 4 ಗಂಟೆ ದಿನಸಿ ಅಂಗಡಿ ತೆರೆಯಲು. ಜಿಲ್ಲಾ ಆಡಳಿತ ಸೂಚಣೆ
ದೇಶವನ್ನು ಏಪ್ರಿಲ್ 14ರವರೆಗೆ ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ರೈಲು, ಬಸ್ಸು ಸಂಚಾರ ಸೇರಿ ಎಲ್ಲ ವಾಹನಗಳ ಓಡಾಟವನ್ನು ರದ್ದು ಮಾಡಲಾಗಿದೆ. ದೇಶವನ್ನು ಏಕಾಏಕಿ ಬಂದ್ ಮಾಡಿರುವುದರಿಂದ ದಿನನಿತ್ಯದ ವಹಿವಾಟಿನ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿದೆ. ದೇಶ ಲಾಕ್ ಡೌನ್ ಆಗಿ ಎರಡು ದಿನ ಆಗಿರುವುದರಿಂದ ಆಹಾರ ಸಾಮಗ್ರಿಗಳ ಕೊರತೆ ಕಂಡು ಬಂದಿಲ್ಲ. ಆದರೆ ಕೆಲವು ದಿನಗಳ ನಂತರ ದಿನನಿತ್ಯ ಬಳಕೆಯ ದಿನಸಿಗಳ ಅಭಾವ ಎದುರಾಗಲಿದೆ.
ಆಹಾರ ಸಾಮಗ್ರಿ ಅಭಾವ ಎದುರಾಗುವುದನ್ನು ಮನಗಂಡಿರುವ ಸರ್ಕಾರ, ಅಗತ್ಯ ಕ್ರಮ ವಹಿಸುತ್ತಿದೆ.
ಅದೇ ರೀತಿ ದಿನದ 4 ಗಂಟೆ ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಹಾಗೆಯೇ ವೈದ್ಯಕೀಯ ಚಿಕಿತ್ಸೆ, ನೆರವು ಬೇಕಾದವರಿಗೆ ಕರ್ಫ್ಯೂ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.