ಮೂಡಲಗಿ: ನಗರದ ಪ್ರತಿಷ್ಠಿತ ಸಂಸ್ಥೆಯಾದ ಕರುನಾಡು ಸೈನಿಕ ತರಬೇತಿ ಕೇಂದ್ರ ಮೂಡಲಗಿ ಯಲ್ಲಿ ಇವತ್ತು ನಮನ ಬೆಳಗ್ಗೆ 10 ಗಂಟೆಗೆ ಛತ್ತೀಸಗಡದಲ್ಲಿ ಸಿಆರ್ ಪಿ ಎಫ್ ಯೋಧರು ತಮ್ಮ ಕರ್ತವ್ಯಕ್ಕೆ ನಿರತರಾಗುವ ಸಂದರ್ಭದಲ್ಲಿ ಬಿಜಾಪುರ ಜಿಲ್ಲೆಯ ಸಿಲಗೂರ್ ಅರಣ್ಯ ಪ್ರದೇಶದಲ್ಲಿ ಹಿಂಬದಿಯಿಂದ ಬಂದ ನಕ್ಸಲರ ಗುಂಡೇಟಿಗೆ ಸುಮಾರು 22 ಯೋಧರು ವೀರಮರಣವನ್ನು ಹೊಂದಿದ್ದು ಜೊತೆಗೆ 8 ಸೈನಿಕರ ಶೋಧನಾಕಾರ್ಯಚರಣೆ ನಡೆದಿದ್ದು 32 ಜನ ಗಾಯಾಳುಗಳಾಗಿದ್ದು ಈ ಎಲ್ಲಾ ಯೋಧರಿಗೆ ಆತ್ಮಕ್ಕೆ ಭಗವಂತ ಶಾಂತಿ ಕಾಪಾಡಲಿ ಹಾಗೂ ಆಯಾ ಕುಟುಂಬಗಳಿಗೆ ದುಃಖಭರಿಸುವ ಶಕ್ತಿ ನೀಡಲೆಂದು ಯೋಧರಿಗೆ ಜ್ಯೋತಿ ಬೆಳಗುವುದರ ಮುಖಾಂತರ ಸಂಸ್ಥೆಯಲ್ಲಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸವಿತಾ ತುಕ್ಕನ್ನವರ್ ಹಾಗೂ ಪ್ರಶಿಕ್ಷಣಾರ್ಥಿಗಳು ( ಬಾವಿ ಸೈನಿಕರು) ಹಾಗೂ ಸಂಸ್ಥೆಯ ಸಹಶಿಕ್ಷಕರು ಕುಂಬಾರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಾದ ಶಂಕರ್ ತುಕ್ಕನ್ನವರ್ ಮಾಜಿ ಸೈನಿಕರು ಉಪಸ್ಥಿತರಿದ್ದರು.