Breaking News
Home / ಕವನ / ನೀರುಕೋಳಿ

ನೀರುಕೋಳಿ

Spread the love

ತಲ ಷಟ್ಪದಿಯಲ್ಲಿ
**************
ನೀರುಕೋಳಿ
****””****
ನೀರು ಕೋಳಿ
ಭಾರಿಚೆಂದ
ಜೋರಿನಿಂದ ತೇಲುತ!
ಸಾರಿಜಗಕೆ
ಬೇರೆಚಿಂತೆ
ಯಾರ ಹಂಗುಬೇಡವು!!

ಚೆಂದದಿಂದ
ಬಂದಬವಣೆ
ನಿಂದು ಛಲದಿ ನೂಕುತ!
ಅಂದದಿಂದ
ನೊಂದ ಮನಕೆ
ಮುಂದೆ ಖುಷಿಯ ನೀಡುತ!!

ಜೋಡಿಯಾಗಿ
ಮೋಡಿಮಾಡಿ
ಬಾಡಿಹೋದ ಮನವನು!
ತೀಡಿತಿದ್ದಿ
ನೋಡಿಕೊಳುತ
ಮಾಡಿಜತನ ಜೀವವ!!

ಕೆರೆಯ ನೀರು
ತೆರೆಯಜೊತೆಗೆ
ಮೆರೆದು ಸೊಗಸು ಸುಂದರ!
ಬರುವ ಜನಕೆ
ಕರವಬೀಸಿ
ಬೆರಗು ಮಾಡಿ ನಲಿಯುವ!!

ಸರಸದಿಂದ
ವಿರಸ ಮರೆತು
ಚಿರದಿ ಸುಖವ ಪಡೆಯುವ!
ಬೆರೆತು ನಾವು
ಧರೆಯಮೇಲೆ
ನೆರೆದ ಮಂದಿ ಕಣ್ಣಿಗೆ!!

ಧರಣೀಪ್ರಿಯೆ
ದಾವಣಗೆರೆ


Spread the love

About Ad9 Haberleri

Check Also

ತೊಟ್ಟಿಲು

Spread the love ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು …