Breaking News

ಹಬ್ಬಕ್ಕಿಂತ ಜೀವ ಮುಖ್ಯ : ಪಿ ಎಸ್ಐನಾಗರಾಜ ಖಿಲಾರೆ

Spread the love

ಕೊಣ್ಣೂರ : ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೋನಾ ಅಬ್ಬರವು ಹೆಚ್ಚಾಗುತ್ತ ದಿನದಿನಕ್ಕೂ ಸಾವು ಸಂಭವವಿಸುತ್ತಲಿವೆ.ಅದನ್ನು ತಡೆಯುವುದಕ್ಕೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಅತ್ಯಾವಶ್ಯವಾಗಿದ್ದು ಮುಸ್ಲಿಂ ಭಾಂದವರ ಪವಿತ್ರ ಹಬ್ಬವಾದ ರಮಜಾನನ್ನು ಮನೆಯಲ್ಲಿಯೆ ಆಚರಿಸಲು ಗೋಕಾಕ ಗ್ರಾಮೀಣ ಪಿ ಎಸ ಐನಾಗರಾಜ ಖಿಲಾರೆಯವರು ಕೊಣ್ಣೂರಲ್ಲಿನ ಜಾಮಿಯಾ ಮಸಿದಿಯಲ್ಲಿ ಕರೆದ ರಮಜಾನ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ‌ ಮುಸ್ಲಿಂ ಭಾಂದವರಿಗೆ ತಿಳಿಸಿದರು.

 

ರಂಜಾನ ತಿಂಗಳು ಮುಸ್ಲಿಮರಿಗೆ ಅತ್ಯಂತ ಪವಿತ್ರ ಮಾಸ. 30 ದಿನಗಳಿಂದ ಮುಸ್ಲಿಮರು ಉಪವಾಸ ಆಚರಿಸಿ ಸಂತೋಷದಿಂದ ಆಚರಿಸುವ ಹಬ್ಬವನ್ನು ಕೊರೊನಾ ಕಾರಣದಿಂದ ತಮ್ಮ ಕುಟುಂಬ ಸಮೇತ ಮನೆಯಲ್ಲಿಯೆ ಆಚರಿಸಿ ಯಾಕೆಂದರೆ ಜೀವಕ್ಕಿಂತ ಯಾವ ಹಬ್ಬವು ದೊಡ್ಡದಲ್ಲ, ಜೀವ ಇದ್ದರೆ ಮತ್ತೊಮ್ಮೆ ಸಂತೋಷ ಹರ್ಷದಿಂದ ಹಬ್ಬವನ್ನು ಆಚರಿಸಬಹುದು.ಅದಕ್ಕಾಗಿ ಈ ಹಬ್ಬವನ್ನು ತಾವೆಲ್ಲರೂ ದೇವರಲ್ಲಿ ಪ್ರಾರ್ಥಿಸಿ ಕೊರೊನಾ ರೋಗ ದೇಸದಿಂದ ತೊಲಗಿಸಲು ಬೇಡಿಕೊಳ್ಳಿರಿ ಎಂದರು.

ಮುಂಜಾಗ್ರತಾ ಕ್ರಮವಾಗಿ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಮಸಿದಿಗಳಲ್ಲಿ ಕೇವಲ ಐದು ಜನರು ಮಾತ್ರ ನಮಾಜ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಇಪ್ತಿಯಾರ್ ಕೂಟಕ್ಕೆ ಅವಕಾಶ ಇರುವುದಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ ಎಂದರು.

ಈ ಪವಿತ್ರ ರಂಜಾನ್ ಹಬ್ಬವು ನಿಮಗೆ, ನಿಮ್ಮ ಕುಟುಂಬದವರಿಗೆ ಶುಭ ತರಲಿ ಪರಮ ದಯಾಮಯನಾದ ಅಲ್ಲಾಹನು ಎಲ್ಲರನ್ನು ಹರಿಸಲಿ.ಎಲ್ಲರಿಗೂ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳನ್ನು ಕೊರಿ ಕೊರೋನಾ ತಡೆಯುವುದಕ್ಕೆ ತಾವುಗಳು ಕೂಡ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಸಹಾಯ ಸಹಕಾರ ನೀಡಿದ್ದಲ್ಲಿ ಆಗ ಮಾತ್ರ ಸೋಂಕು ಹರಡುವುದನ್ನು ತಡೆಯಬಹುದೆಂದರು.

ಈ ಸಂದರ್ಭದಲ್ಲಿ
ಸಾಜಿದ ಜಗದಾಳ ಕಮುರುದ್ದೀನ್ ಪಿರಜಾದೆ ಅಲ್ಲಾವುದ್ದೀನ್ ಪಿರಜಾದೆ ಪರವೇಜ ನಾಯಕ ರಫೀಕ ಜಾಫರ ಕೊಣ್ಣೂರ ಪೋಲಿಸ್ ಎಎಸ್ಐ ಟಿಎಸ್ದದಳವಾಯಿ ಸಿಬ್ಬಂದಿಗಳಾದ ಸಜೀವ ಮಾನೆಪ್ಪಗೋಳ ಮುತ್ತೆಪ್ಪ ಸೊಲ್ಲಾಪುರ ಉಪಸ್ಥಿತರಿದ್ದರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …