Breaking News
Home / ಮೂಡಲಗಿ / ಎ.೨೪ ರಿಂದ ಪುಲಗಡ್ಡಿಯಲ್ಲಿ ಜಾತ್ರಾ ಮಹೋತ್ಸವ ಹಾಗೂ ಜಾನಪದ ಕಲಾ ಮೇಳ

ಎ.೨೪ ರಿಂದ ಪುಲಗಡ್ಡಿಯಲ್ಲಿ ಜಾತ್ರಾ ಮಹೋತ್ಸವ ಹಾಗೂ ಜಾನಪದ ಕಲಾ ಮೇಳ

Spread the love

 

ಮೂಡಲಗಿ: ತಾಲೂಕಿನ ಫುಲಗಡ್ಡಿಯಲ್ಲಿ ಶ್ರೀ ಚಂದ್ರಮ್ಮತಾಯಿ ಹಾಗೂ ಬಬಲಾದಿ  ಶ್ರೀ ಸದಾಶಿವ ಶಿವಯೋಗಿಗಳ ಮತ್ತು ಶ್ರೀ ಶೆಟ್ಟೆಮ್ಮದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ  ಮತ್ತು ಕನ್ನಡ ಜಾನಪದ ಸಂಸ್ಥೆ ಗೋಕಾಕ ಆಶ್ರಯದಲ್ಲಿ ಎ.೨೪ ಮತ್ತು ೨೫ ರಂದು ಜಾನಪದ ಕಲಾ ಮಹೋತ್ಸವ ಜರುಗಲಿದೆ.
   ಎ.೨೪ರಂದು ಅದೇ ದಿನ ಬೆಳಿಗ್ಗೆ ೬-೦೦ ಗಂಟೆಗೆ ಶ್ರೀ ಚಂದ್ರಮ್ಮತಾಯಿ, ಹಾಗೂ ಬಬಲಾದಿ  ಶ್ರೀ ಸದಾಶಿವ ಶಿವಯೋಗಿಯವರ ಗದ್ದುಗೆ ಅಭಿಷೇಕ, ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗುವುದು,  ೧೦.೩೦ ಕ್ಕೆ ಅರಬಾವಿ  ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿವರು ಉದ್ಘಾಟಿಸಲಿದ್ದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿವರು ಉಪಸ್ಥಿತ. ವಡೇರಹಟ್ಟಿ ಗ್ರಾ.ಪಂ ಅಧ್ಯಕ್ಷ ಲಕ್ಕವ್ವಾ ಹಾದಿಮನಿ ಅಧ್ಯಕ್ಷತೆ ವಹಿಸುವರು,  ಮುರಳಿ. ವಜ್ರಮಟ್ಟಿ, ಮಲಗೌಡ ಪಾಟೀಲ. ಉದ್ದಣ್ಣಾ ಗೋಡೇರ, ಕನ್ನಡ ಜಾನಪದ ಸಂಸ್ಥೆಯ ಅಧ್ಯಕ್ಷ ರಮೇಶ ಕುಲಕರ್ಣಿ. ಮಹಾಂತೇಶ ಪಾಟೀಲ. ಮಹಾಂತೇಶ ಪಾಟೀಲ. ಪಿ.ಡಿ.ಓ ಶಿವಾನಂದ ಗುಡಸಿ,ಯಮನಪ್ಪಾ ಸಣ್ಣಕ್ಕಿ ತುಕಾರಾಮ ಪಾಟೀಲ, ಅಶೋಕ ಹುಚರಡ್ಡಿ, ಲಕ್ಷ್ಮೀ ಬಾಪುಕುರಿ ತಂಗೆವ್ವಾ  ಬಾಜನವರ ಭಾಗವಹಿಸುವರು.
       ನಂತರ ೧೨ ಗಂಟೆಗೆ ವಿಚಾರಗೋಷ್ಠಿಯಲ್ಲಿ  ಕಪರಟ್ಟಿ-ಕಳ್ಳಿಗುದ್ದಿಯ ಬಸವರಾಜ ಹಿರೇಮಠ ಅವರ ನೇತೃತ್ವ ದಲ್ಲಿ ಗೋಕಾಕ ಹಿರಿಯ ಜಾನಪದ ರಂಗಭೂಮಿ ಕಲಾವಿದರು ಈಶ್ವರಚಂದ್ರ ಬೆಟಗೇರಿ. ಅಧ್ಯಕ್ಷತೆ. ರಾಯಬಾಗ ಮಕ್ಕಳ ಸಾಹಿತಿಗಳು  ಡಾ. ಲಕ್ಷ್ಮಣ ಚೌರಿ. ಆಶಯ ನುಡಿ ಆಡುವರು ಜಾನಪದ ಕಲಾವಿದರ ತಲ್ಲಣಗಳು ವಿಷಯ ಕುರಿತು ಗೋಕಾಕ ಸಾಹಿತಿ ಹಾಗೂ ಕಲಾವಿದರು ಪ್ರಾ.ಜಯಾನಂದ ಮಾದರ ಹಾಗೂ  ಜಾನಪದ ಕಲೆ ಹಾಗೂ ಜಾಗತೀಕರಣ ವಿಷಯದ ಮೇಲೆ ಗೋಕಾಕದ ಮಹಿಳಾ ಸಾಹಿತಿ ವಿದ್ಯಾ ರೆಡ್ಡಿ. ಉಪನ್ಯಾಸ ನೀಡಲಿದ್ದಾರೆ. ಖಾನಟ್ಟಿಯ ಸಾಹಿತಿ ಡಾ.ಮಹಾದೇವ ಪೋತರಾಜ ಅತಿಥಿಯಾಗಿರುವರು.
            ಮದ್ಯಾಹ್ನ ೨ ಘಂಟೆಗೆ ಜಾನಪದ ಕಲಾ ಮಹೋತ್ಸವದಲ್ಲಿ ತಳಕಟನಾಳ ವಿಠಲ ಬಾಪೂಕುರಿ ಏಕಪಾತ್ರಾಭಿನಯ, ಶಿಂಗಳಾಪೂರ ನಾಮದೇವ ಹರಿಜನ ಹಂತಿಪದ,  ರಾಜಾಪೂರ ಗೌರವ್ವಾ ಇ. ಹಿರೇಕುರಬರ ಹಾಗೂ ಕಲಾ ತಂಡದವರಿಂದ ಸಂಪ್ರದಾಯ ಪದ, ಕುಲಗೋಡ ಶಿವಪುತ್ರ ಸಣ್ಣಕ್ಕಿ ಹಾಗೂ ತಂಡ  ದಾಸರ ಪದ ಮುಗಳಖೋಡದ ಸಚಿನಕುಮಾರ. ಹಿರೇಮಠ ಸುಗಮ ಸಂಗೀತ, ಸಿರಿನಾಡು ಶಿಂಗಳಾಪೂರ ಜಾನಪದ ಕಲಾ ಸಂಘ ಶಿಂಗಳಾಪೂರ ಸೋಬಾನಪದ, ಚಿಕ್ಕಾಲಗುಂಡಿಯ ಗೈಬೂಸಾಬ ಗಲಗಲಿ ಹಾಗೂ ತಂಡ. ರಿವಾಯತ ಪದ, ಉದಗಟ್ಟಿಯ  ಶ್ರೀ ಸಿದ್ಧಾರೂಢ ಭಜನಾ ಮಂಡಳ ಭಜನೆಪದ, ಶ್ರೀ ಮುತ್ತೇಶ್ವರ ದಟ್ಟಿ ಕುಣಿತ. ಕಲಾ ತಂಡ ಹಡಗಿನಾಳ ಇವರಿಂದ ದಟ್ಟಿ ಕುಣಿತ, ಶ್ರೀ ಉದ್ದಮ್ಮಾದೇವಿ ಡೊಳ್ಳು ಹಾಡಿನ ಮೇಳ ಉದಗಟ್ಟಿ ಇನ್ನೂ ಅನೇಕ ಜಾನಪದ ಕಲಾ ಪ್ರದರ್ಶನ ಜರುಗಲಿವೆ
    ಸಂಜೆ ೭ ಗಂಟೆಗೆ ಜರುಗುವ ಆಧ್ಯಾತ್ಮ ಕಾರ್ಯಕ್ರಮದಲ್ಲಿ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಶ್ರೀಗಳು, ಹುಣಶ್ಯಾಳ.ಪಿ.ಜಿ ಯ  ಶ್ರೀ ನಿಜಗುಣ ದೇವರು, ಧೂಪದಾಳದ ಶ್ರೀ ಭೀಮಾನಂದ ಮಹಾಸ್ವಾಮಿಗಳು, ಕೋಚರಿ-ಕಲ್ಲೋಳಿ ಶ್ರೀ ಸಿದ್ಧಾರೂಢ ಆಶ್ರಮದ ಪ.ಪೂ.ಶ್ರೀ ಕಲ್ಮೇಶ್ವರ ಮಹಾಸ್ವಾಮಿಗಳು. ಶಿಂಗಳಾಪೂರದ ಶ್ರೀ ಶಿವಾನಂದ ಶ್ರೀಗಳು,  ವಡೇರಹಟ್ಟಿ ಶ್ರೀ ನಾರಾಯಣ ಶರಣರು,  ಶ್ರೀ ದಯಾನಂದ ಸ್ವಾಮಿಗಳು,ಕೊಟಬಾಗಿಯ ಶ್ರೀ ಪ್ರಭುದೇವ ಸ್ವಾಮಿಜಿ, ತಳಕಟನಾಳದ ಶ್ರೀ ಆತ್ಮಾನಂದ ಸ್ವಾಮಿಗಳು, ಶರಣ ನಾರಾಯಣ ಜಾಧವ  ಪ್ರವಚನ ನೀಡಲಿದ್ದಾರೆ
          ಸೋಮವಾರ ೨೫ ರಂದು ಮದ್ಯಾಹ್ನ ೨-೦೦ ಗಂಟೆಗೆ ಶ್ರೀ ಶೆಟ್ಟೆಮ್ಮದೇವಿ ಪಲ್ಲಕ್ಕಿ ಉತ್ಸವ ಹಾಗೂ ಬಬಲಾದಿ ಶ್ರೀ ಸದಾಶಿವ ಶಿವಯೋಗಿಯವರ ಭಾವಚಿತ್ರ ಮೆರವಣಿಗೆ ಮತ್ತು ಮಹಾಪ್ರಸಾದ ನಡೆಯಲಿದೆ.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …

Leave a Reply

Your email address will not be published. Required fields are marked *