Breaking News
Home / ಮೂಡಲಗಿ / ಅಪಾರ ಜನಸ್ತೋಮ ಮಧ್ಯೆ ಜರುಗಿದ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

ಅಪಾರ ಜನಸ್ತೋಮ ಮಧ್ಯೆ ಜರುಗಿದ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

Spread the love


ಮೂಡಲಗಿ: ಕೊರೋನಾ ಸಂದರ್ಭದಲ್ಲಿ ಯಾದವಾಡ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ ಯಾದವಾಡದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವು ಈ ವರ್ಷ ಎ.12 ರಿಂದ 22ರವರಿಗೆ ಜರುಗುತ್ತಿರುವ ನಿಮಿತ್ಯ ಶನಿವಾರದಂದು ಚೌಕಿಮಠದ ಪ.ಪೂ ಶ್ರೀ ಶಿವಯೋಗಿ ದೇವರು ಸಾನಿಧ್ಯದಲ್ಲಿ ಹಾಗೂ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ ಜರುಗಿತು.


   ಶನಿವಾರದಂದು ಯಾದವಾಡ ಕ್ಷೇತ್ರಾಧಿಪತಿ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಮೂರ್ತಿಗಳಿಗೆ ವಿಷೇಶ ಅಭಿಷೇಕ ಮತ್ತು ಪೂಜೆ ಹಾಗೂ ಹೂ ಪುಷ್ಪಗಳಿಂದ ಶೃಂಗರಿಸಾಲ್ಲಾಗಿತು.
ಸಂಜೆ  ಯಾದವಾಡ ಗ್ರಾಮದ ಚೌಕೇಶ್ವರ ಮಂದಿರದಿAದ ಬಸ್ ನಿಲ್ದಾನ ಹತ್ತಿರದ ಹೊನ್ನಮ್ಮ ಪಾದಗಟ್ಟೆಯವರಿಗೆ ಮತ್ತು ಬಸವೇಶ್ವರ ದೇವಸ್ಥಾನದವರಿಗೆ ಶ್ರೀ ಚೌಕೇಶ್ವರ ರಥೋತ್ಸವ ಜರುಗಿತು ನಂತರ ಘಟಗಿ ಬಸವೇಶ್ವರ ದೇವಸ್ಥಾನ ಹತ್ತಿರ ತಳಿಲು ತೋರಣ, ಬೃಹತ್ತಕಾರದ ರುದ್ರಾಕ್ಷಿ ಹಾಗೂ ಹೂ ಮಾಲೆಗಳಿಂದ ಶೃಂಗರಿಸಿದ ಶ್ರೀ ಘಟಗಿ ಬಸವೇಶ್ವರ ರಥೋತ್ಸವಕ್ಕೆ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಅಪಾರ ಜನಸ್ತೋಮ ಮತ್ತು ಜಯಘೋಷಣೆ ಮಧ್ಯೆದಲ್ಲಿ ಶ್ರೀ ಘಟಗಿ ಬಸವೇಶ್ವರ ರಥೋತ್ಸವ ಬಸವನ ಕಟ್ಟೆ ವರಿಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತ್ತು.
 ಭಕ್ತರು ರಥೋತ್ಸವಕ್ಕೆ ಬಾಳೆ ಹಣ್ಣು, ಬೆಂಡು-ಬೆತ್ತಾಸು, ಕಾರಿಕು, ತೆಂಗಿನಕಾಯಿ ಹಾರಿಸಿ ತಮ್ಮ ಹರಕೆಯನ್ನು ತಿರಿಸಿ ಪುನಿತರಾದರು. ರಥೋತ್ಸವದಲ್ಲಿ ಝಾಂಜ ಪಥಕ, ಕರಡಿ ಮೇಳಗಳು ಮೇರಗು ನೀಡಿದವು.  
  ಈ ಸಂಧರ್ಭದಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ, ಸದಸ್ಯರು, ಸಮಾಜ ಸೇವಕ ಕಲ್ಮೇಶ ಗಾಣಗಿ ಹಾಗೂ ಯಾದವಾಡ, ಕೊಪ್ಪದಟ್ಟಿ, ಕಮನಕಟ್ಟಿ, ಗಿರಿಸಾಗರ, ಗುಲಗೋಜಿಕೊಪ್ಪ, ಕುರಬಟ್ಟಿ, ಮಾನೋಮ್ಮಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದರು


Spread the love

About Ad9 Haberleri

Check Also

ಇದು ಅಂಗನವಾಡಿ ಕೇಂದ್ರನಾ? ಇಲ್ಲ ಬೇರೇ ಯಾವ ಕಾನ್ವೆಂಟ್ ಶಾಲೆಗೆ ಬಂದಿದ್ವಾ? :ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ – ವಡೇರಹಟ್ಟಿಯಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ ಕ್ಲಾಸ್ ಅಂಗನವಾಡಿಯು ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. …

Leave a Reply

Your email address will not be published. Required fields are marked *