Breaking News
Home / ಮೂಡಲಗಿ / ಪುರಸಭೆ ವಿರುದ್ಧ ಕೆ ಆರ್ ಎಸ್ ಹಾಗೂ ವಿವದ ಸಂಘಟನೆಗಳ ಪ್ರತಿಭಟನೆ

ಪುರಸಭೆ ವಿರುದ್ಧ ಕೆ ಆರ್ ಎಸ್ ಹಾಗೂ ವಿವದ ಸಂಘಟನೆಗಳ ಪ್ರತಿಭಟನೆ

Spread the love

ಮೂಡಲಗಿ: ಪುರಸಭೆಯ ಜಾಗಗಳ ಅನದಿಕೃತವಾಗಿ ಅತಿಕ್ರಮಿಸಿರುವದು, ಟೆಂಡರ ಪ್ರಕ್ರಿಯೆ ಇಲ್ಲದೇ ನೇರ ನೇಮಕಾತಿ ಪ್ರಶ್ನಿಸಿ ಹಾಗೂ ವಿಕಲಾಂಗರಿಗೆ ದೊರೆಯುವ ದ್ವಿಚಕ್ರಗಳನ್ನು ವಾಹನಗಳನ್ನು ಯಾವ ಆಧಾರದ ಮೇಲೆ ಫಲಾನುಭವಿಗಳಿಗೆ ವಿತರಿಸಲಾಗಿರುವ ಕುರಿತು ಹಲವಾರು ಬಾರಿ ಲಿಖಿತವಾಗಿ ಕೇಳಿದರೂ ಉತ್ತರಿಸದ ಸ್ಥಳೀಯ ಪುರಸಭೆಯ ವಿರುದ್ದ ಪುರಸಭೆ ಕಚೇರಿ ಮುಂದೆ ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಗುರುವಾರ ಕೆಲ ವೇಳೆ ಪ್ರತಿಭಟಿಸಿ ಧರಣ ನಡೆಸಿದರು.
ಈ ವೇಳೆಯಲ್ಲಿ ಸಾಮಾಜಿಕ ಕಾರ್ಯಕರ್ತ ಈರಪ್ಪ ಢವಳೇಶ್ವರ ಮಾತನಾಡಿ, ಪುರಸಭೆಯಲ್ಲಿ ಹಲವಾರು ಕಾನೂನು ಬಾಹಿರ ಚಟುವಟಿಕಗಳು ನಡೆಯುತ್ತಿವೆ ಸಾರ್ವಜನಿಕರ ಆಸ್ತಿ ಪಾಸ್ತಿಗಳ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ತಿರುಚಲಾಗಿದೆ, ಸಾರ್ವಜನಿಕರು ತಮ್ಮ ಮನೆ ಕರ, ಆಸ್ತಿ ಕರಗಳನ್ನು ಭರಿಸಿದ್ದರು ಸಹ ಪುರಸಭೆಯಲ್ಲಿ ಇದರ ಕುರಿತು ಮಾಹಿತಿಗಳು ಲಬ್ಯವಿರುವುದಿಲ್ಲ ಇದರಿಂದ ಮತ್ತೆ ಮತ್ತೆ ಹಣ ಪಾವತಿಸುವಂತಾಗಿದೆ ಎಂದು ಆಪಾದಿಸಿ, ಅಕ್ರಮಿತ ಅನಧಿಕೃತ ಕಟ್ಟಡ ಹಾಗೂ ಜಾಗೆಗಳನ್ನು ತೆರುವುಗೊಳಿಸಿ ಪುರಸಭೆ ಆಸ್ಥಿಗಳನ್ನು ತಮ್ಮ ಸುಪರ್ದಿಗೆ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವ ಸದುದ್ದೇಶಗಳಿಗೆ ಉಪಯೋಗಿಸಬೇಕು. ಅಗತ್ಯ ಕ್ರಮಕೈಗೊಳ್ಳದಿದ್ದರೆ ಕೊಟ್ಟ ಗಡುವಿನೊಳಗೆ ಎಲ್ಲವನ್ನು ಸರಿಪಡಿಸದಿದ್ದರೆ ವಿವಿಧ ಸಂಘಟನೆಗಳೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ ಬಿ ಪಾಟೀಲ ಹಾಗೂ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು ಮದ್ಯೆ ಪ್ರವೇಶಿಸಿ ಧರಣ ಹಿಂಪಡೆಯುವಂತೆ ಸಲಹೆ ನೀಡಿದಾಗ ಕಾರ್ಯಕರ್ತರು ಒಂದು ವಾರ ಗಡುವು ನೀಡಿ, ಮನವಿ ಸಲ್ಲಿಸಿ ಧರಣ ಹಿಂಪಡೆದರು.
ಪ್ರತಿಭಟನೆಯಲ್ಲಿ ಕೆಆರ್‍ಎಸ್ ಪಕ್ಷದ ಅಧ್ಯಕ್ಷ ಅಬ್ದುಲ್ ಪೈಲವಾನ, ಜನಪರ ವೇದಿಕೆಯ ಅಧ್ಯಕ್ಷ ಲಕ್ಷ್ಮಣ ಮೆಳ್ಳಿಗೇರಿ, ಸುನಿಲ ಗಸ್ತಿ, ಕಾರ್ಯಕರ್ತರಾದ ಎಸ್ ಆರ್ ಮಂಟೂರ, ಅಬ್ದುಲ್ ಜಮಾದಾರ, ಇಬ್ರಾಹಿಮ ಮನಗೂಳಿ, ರಾಮು ಝಂಡೆಕುರಬರ, ಯಲ್ಲಾಲಿಂಗ ಝಂಡೆಕುರಬರ, ಉತ್ತಪ್ಪ ಝಂಡೆಕುರಬರ, ವಿನೋದ ಪುಟಾಣ , ರವೀಂದ್ರ ಕೊರವಿ, ಕಲ್ಲಪ್ಪ ಕೋಳಿ, ಸಿದ್ದಪ್ಪ ಡಾಂಗೆ, ಸೂರಮ್ಮ ಡಾಂಗೆ ಸೇರಿದಂತೆ ಹಲವರಿದ್ದರು.


Spread the love

About Ad9 Haberleri

Check Also

ಇದು ಅಂಗನವಾಡಿ ಕೇಂದ್ರನಾ? ಇಲ್ಲ ಬೇರೇ ಯಾವ ಕಾನ್ವೆಂಟ್ ಶಾಲೆಗೆ ಬಂದಿದ್ವಾ? :ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ – ವಡೇರಹಟ್ಟಿಯಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ ಕ್ಲಾಸ್ ಅಂಗನವಾಡಿಯು ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. …

Leave a Reply

Your email address will not be published. Required fields are marked *