Breaking News

ಸೆ. 18 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಉಪ್ಪಾರ ಯುವ ಸಮಾವೇಶ

Spread the love


ಮೂಡಲಗಿ:  ರಾಜ್ಯದಲ್ಲಿ 70ರಿಂದ 80ಲಕ್ಷ ಜನಸಂಖ್ಯೆ ಹೊಂದಿದ್ದರೂ 40 ವರ್ಷದಿಂದ ಉಪ್ಪಾರ ಸಮಾಜವನ್ನು ಗುರುತಿಸಿ ಗೌರವ ಸ್ಥಾನಮಾನ ಅಥವಾ ರಾಜಕೀಯ ಸ್ಥಾನಮಾನ ನೀಡುವಂತಹ ಕೆಲಸ ನಮ್ಮ ರಾಜ್ಯದಲ್ಲಿ ಯಾವುದೇ ಪಕ್ಷದಿಂದ ಅಥವಾ ಸರ್ಕಾರದಿಂದ ಆಗಿಲ್ಲ ಎಂದು ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ ವಿಷ್ಣು ಲಾತೂರ ಹೇಳಿದರು.
ಅವರು ಮಂಗಳವಾರ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಸರ್ಕಾರದ ಗಮನ ಸೆಳೆಯಲು ಹಲವಾರು ಸಮಾವೇಶ ಮಾಡಿದ್ದು ಆ ನಿಟ್ಟಿನಲ್ಲಿ ದಿ. ಸೆ. 18ರಂದು ಬೆಳಗಾವಿಯ ರೈಲ್ವೆ ನಿಲ್ದಾಣದ ಸಭಾಭವನದಲ್ಲಿ ರಾಜ್ಯ ಉಪ್ಪಾರ ಮಹಾಸಭಾದ ವತಿಯಿಂದ ರಾಜ್ಯಮಟ್ಟದ ಪ್ರತಿಭಾಪುರಸ್ಕಾರ ಮತ್ತು ಯುವ ಸಮಾವೇಶ ಮತ್ತು ಮಹಿಳಾ ಜಾಗೃತ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪಿಯುಸಿ ಯಲ್ಲಿ ಶೇ 80 ಮತ್ತು 80ಕ್ಕಿಂತ ಅಧಿಕ ಅಂಕ ಪಡೆದು ತೇರ್ಗಡೆಯಾದ ಸಮಾಜದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿಶೇಷ ಸಾಧಕರಿಗೆ ಪ್ರತಿಭಾ ಪುರಸ್ಕಾರ ಗೌರವಿಸಲಾಗುವುದು. ಈ ಸಮಾರಂಭದಲ್ಲಿ ಸಮಾಜದ ಅನೇಕ ಪೂಜ್ಯರು, ರಾಜಕೀಯ ಮುಖಂಡರು ಗಣ್ಯರು ಆಗಮಿಸುವರು ಈ ಸಮಾವೇóಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಬೇಕು ಎಂದು ಕೋರಿದರು.
ಉಪ್ಪಾರಟ್ಟಿಯ ಶ್ರೀ ನಾಗೇಶ್ವರ ಸ್ವಾಮೀಜಿ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ. ಅರುಣ ಸವತಿಕಾಯಿ, À ಸುಭಾಸ ಪೂಜೇರಿ ಮಾತನಾಡಿದರು. ಹೆಚ್ಚಿನ ಮಾಹಿತಿಗಾಗಿ 9448225046-9742716264,9741655521,9880420437,9448637919 ಸಂಪರ್ಕಿಸಲು ಕೋರಿದ್ದಾರೆ.


Spread the love

About Ad9 News

Check Also

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

Spread the love ಮೂಡಲಗಿ : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಭಾರತದ ಸಂವಿಧಾನ, ದೇಶದ ಪ್ರತಿಯೊಬ್ಬ ನಾಗರೀಕನಿಗೆ ಪವಿತ್ರ …

Leave a Reply

Your email address will not be published. Required fields are marked *