
*ಗೋಕಾಕ*: ರಾಸು ವಿಮೆ ಯೋಜನೆಯನ್ನು ಕೆಎಮ್ಎಫ್ನಿಂದ ಜಾರಿಗೊಳಿಸುವ ಮೂಲಕ ಸಮಸ್ತ ರೈತ ವರ್ಗಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕೆಎಮ್ಎಫ್ ನಿರ್ದೇಶಕ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇತ್ತಿಚೆಗೆ ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ ಒಟ್ಟು 5.20 ಲಕ್ಷ ರೂಗಳ ಚೆಕ್ನ್ನು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಕೆಎಮ್ಎಫ್ಗೆ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರ ರೈತರ ಹಸು ಮೃತಪಟ್ಟರೇ ಅದಕ್ಕೆ 50ಸಾವಿರ ರೂಗಳ ವಿಮೆ ಸೌಲಭ್ಯವನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.
ಹೈನುಗಾರಿಕೆಯನ್ನು ಉತ್ತೇಜಿಸಲು ನಮ್ಮ ಕೆಎಮ್ಎಫ್ನಿಂದ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಗ್ರಾಹಕರಿಗೆ ಹೊರೆಯಾಗದಂತೆ ಈಗಾಗಲೇ ಹಾಲಿನ ಬೆಲೆಯನ್ನು ಇಳಿಸಲಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಎಮ್ಎಫ್ ಸಂಸ್ಥೆಯಿಂದ ನೂರಾರು ಬಗೆಯ ಸಿಹಿ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಗಳಲ್ಲಿ ಲಭ್ಯವಿವೆ ಎಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಪರವಾಗಿ 3.20 ಲಕ್ಷ ರೂಗಳ 15 ಜನ ಮೃತಪಟ್ಟ ಸದಸ್ಯರ ವಾರಸುದಾರರಿಗೆ ಮತ್ತು 2ಲಕ್ಷ ರೂಗಳ ವೆಚ್ಚದ ಸದಸ್ಯರ ಮರಣ ಹೊಂದಿದ ರಾಸುಗಳಿಗೆ ತಲಾ 50ಸಾವಿರಗಳಂತೆ 4ಫಲಾನುಭವಿಗಳಿಗೆ ಒಟ್ಟು 5.20 ಲಕ್ಷ ರೂಗಳ ಚೆಕ್ನ್ನು ವಿತರಿಸಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಮುತ್ತೆಪ್ಪ ಖಾನಪ್ಪಗೋಳ, ಗೋಕಾಕ ವಿಸ್ತರಣಾಧಿಕಾರಿ ಬಿ.ಕೆ.ಜಾಧವ ಮತ್ತು ಮೂಡಲಗಿ ವಿಸ್ತರಣಾಧಿಕಾರಿ ರವಿ ತಳವಾರ ಮುಂತಾದವರು ಉಪಸ್ಥಿತರಿದ್ದರು.
Ad9 News Latest News In Kannada