
ಗೋಕಾಕ್– ನಾಡಿನ ಜನತೆಗೆ ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿಯವರು ೭೫ ನೇ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಜಗತ್ತಿನ ಅತಿ ದೊಡ್ಡದಾದ ಸಂವಿಧಾನವನ್ನು ರಚಿಸಿ ಪ್ರಜಾಪ್ರಭುತ್ವ ದೇಶವನ್ನಾಗಿಸಲು ಹಗಲಿರುಳು ಹೋರಾಟ ನಡೆಸಿರುವ ಎಲ್ಲ ಮಹನೀಯರನ್ನು ಸ್ಮರಿಸುವ ಅವಕಾಶವು ಒದಗಿ ಬಂದಿದೆ. ಇವರು ಹಾಕಿಕೊಟ್ಟ ದೇಶ ಪ್ರೇಮದ ದಾರಿಯಲ್ಲಿ ನಾವೆಲ್ಲರೂ ಒಂದಾಗಿ ಸಾಗೋಣ. ದೇಶ ಪ್ರೇಮಿಗಳ ತ್ಯಾಗ, ಬಲಿದಾನವನ್ನು ಸ್ಮರಿಸೋಣ. ಸಂವಿಧಾನ ಪಿತಾಮಹ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು, ದೇಶದ ಐಕ್ಯತೆಗಾಗಿ ಶ್ರಮಿಸೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.
Ad9 News Latest News In Kannada