Breaking News
Home / ಕವನಗಳು / ಕೃತಿ : ನಿನ್ನೆ ಮೊನ್ನೆ ನಮ್ಮ ಜನ… ಜೇಬರ್ ಸರ್ ಅವರಿಗೆ ಹೃದಯಪೂರ್ವಕ ವಂದನೆಗಳು : ಡಾ. ನಂದಿನಿ

ಕೃತಿ : ನಿನ್ನೆ ಮೊನ್ನೆ ನಮ್ಮ ಜನ… ಜೇಬರ್ ಸರ್ ಅವರಿಗೆ ಹೃದಯಪೂರ್ವಕ ವಂದನೆಗಳು : ಡಾ. ನಂದಿನಿ

Spread the love

ಕೃತಿ : ನಿನ್ನೆ ಮೊನ್ನೆ ನಮ್ಮ ಜನ…
ಸಾಹಿತಿ : ಜೆ.ಬಿ. ರಂಗಸ್ವಾಮಿ
( ನಿವೃತ್ತ. ಡಿ. ವೈ.ಎಸ್. ಪಿ )
ಜೇಬರ್ ಸರ್ ಅವರಿಗೆ ಅವರ ಕೃತಿಯನ್ನು ಓದುವ ಇಚ್ಛೆ ವ್ಯಕ್ತಪಡಿಸಿ ಮೆಸೇಜಿಸಿದವಳು ಹಾಗೇ ಮರೆತಿದ್ದೆ. ಕೆಲವೇ ದಿನಗಳಿಗೆ ಕಾಲೇಜ್ ಅಡ್ರೆಸ್ಸ್ ಗೆ ಪುಸ್ತಕದ ಪೋಸ್ಟ್ ಬಂದಿದ್ದು ನೋಡಿ ತೀರದ ಸಂಭ್ರಮ. ಒಬ್ಬ ನಿವೃತ್ತ ಡಿ. ವೈ. ಎಸ್. ಪಿ. ಅಧಿಕಾರಿ ತಮ್ಮ ಕೃತಿಯನ್ನು ಕಳುಹಿಸಿದ್ದಾರೆಂದರೆ ಕ್ಷಣ ನಂಬಲಾಗಲಿಲ್ಲ. ಯಾವುದೇ ಪುಸ್ತಕವಿರಲಿ ಒಂದೇ ಗುಕ್ಕಿಗೆ ಓದಿ ಮುಗಿಸುವ ಅಭ್ಯಾಸ ಮತ್ತು ಚಟದವಳು ನಾನು. (ಪುಸ್ತಕಕ್ಕೆ ಓದಿಸಿಕೊಂಡು ಹೋಗುವ ಸಾಮರ್ಥ್ಯವಿರಬೇಕು ಅದು ಮುಖ್ಯ )
ಜೇಬರ್ ಸರ್ ಬರವಣಿಗೆ ನನ್ನಂಥ ಓದುವ ಚಟದವಳಿಗೆ ಹಬ್ಬದಂತೆ….. ಪುಸ್ತಕದಲ್ಲಿ ಏನುಂಟು, ಏನಿಲ್ಲ…??
ಅಮ್ಮನ ಮಮತೆ… ಅಪ್ಪನ ಪ್ರೀತಿ… ದೇವೇಗೌಡರ ಕ್ರಾಂತಿಕಾರಿ ಗುಣ, ಅಪೂರ್ವ ಸಂಯಮ, ತಾಳ್ಮೆ…. ಇಂದಿರಾಗಾಂಧಿಯವರನ್ನು ನೋಡಿ ನಿಬ್ಬೆರಗಾಗಿದ್ದು…..ರಾಜೀವ್ ಗಾಂಧಿಯ
ಪ್ರೌಢಿಮೆಗೆ ಮಾರು ಹೋಗಿದ್ದು….ಲಂಕೇಶ್,….
ಪೂರ್ಣ ಚಂದ್ರ ತೇಜಸ್ವಿಯವರ ಒಡನಾಟ…. ಇವೆಲ್ಲಾ ಮನದಾಳದ ಮಾತಿನಂತೆ ಪದಗಳಾಗಿವೆ…
ನಿಷ್ಠ ಪೊಲೀಸ್ ಅಧಿಕಾರಿ ಶಿಕ್ಷೆ ಕೊಡುವುದೇ ಅಲ್ಲದೆ ಹೇಗೆಲ್ಲಾ ಶಿಕ್ಷೆಗೆ ಗುರಿಯಾಗುತ್ತಾರೋ.. ಓದಿದರೆ ಸಿನಿಮಾ ನೋಡುತ್ತಿರುವ ಅನುಭವ….
ಕೃತಿಯಲ್ಲಿ ಯಾರನ್ನೂ ಯಥೇಚ್ಚವಾಗಿ ಹೊಗಳುವ ಗೋಜಿಗೆ ಹೋಗಿಲ್ಲ. ಒಬ್ಬೇ ಒಬ್ಬರನ್ನು ನಿಂದಿಸಿಲ್ಲ. ಬರವಣಿಗೆ ಮೇಲಿನ ಅವರ ಒಲವು ಮಾತ್ರ ಪ್ರತೀ ಪದಗಳಲ್ಲೂ ಸ್ಪಷ್ಟ… ಸ್ಪಷ್ಟ…
ವರ್ಷದ ಮೊದಲ ಓದು…. ಅತೀವ ಭಾವತೀವ್ರತೆಗೊಳಪಡಿಸಿದ ಕೃತಿ ಉಡುಗೊರೆಯಾಗಿ ಜೇಬರ್ ಸರ್ ರಿಂದ ಪಡೆದ ಸಾರ್ಥಕತೆ
ಹೃದಯಪೂರ್ವಕ ವಂದನೆಗಳೊಂದಿಗೆ….
ಶುಭಾಶಯ ಕೋರುವ
                     ಡಾ. ನಂದಿನಿ…


Spread the love

About Ad9 Haberleri

Leave a Reply

Your email address will not be published. Required fields are marked *