ಚುನಾವಣೆಯು ಬಂದಾಯ್ತು
ಅಭ್ಯರ್ಥಿಯು ನಿಂತಾಯ್ತು
ಮತದ ಆಮಿಷ ಶುರುವಾಯ್ತು
ಮನ ವೊಲಿಸಲು ತಿಪ್ಪರ ಲಾಗ ಹಾಕಾಯ್ತು
ಏತಕೆ ಈ ಪರಿ ಬೇಡಿಕೆಯು
ಮಾಡಬೇಕಲ್ಲವೇ ಕಾಯಕವು
ಮತದಾರ ಯೋಚಿಸಿ ಮತ ನೀಡುವನು
ತಿಳಿದಿದ್ದಾನೆ ನಾಯಕರಾರೆಂದು
ವೋಟ್ ಪಡೆಯಲು ಗಿಮಿಕ್ ಶುರುವಾಯ್ತು
ಅಶ್ವಾಸನೆ ಪಟ್ಟಿ ನೀಡಾಯ್ತು
ಪರಿ ಪರಿ ಸುಳ್ಳಿನ ಕಂತೆ ಹೊಸೆ ದಾಯ್ತು
ಜೊತೆಗೇ ನೋಟಿನ ಆಮಿಷ ವೊಡ್ಡಾಯ್ತು
ಮತದಾರನೇ ನೀ ಎಚ್ಚರವಿರ ಬೇಕಯ್ಯ
ಅಭ್ಯರ್ಥಿ ಯಾರೆಂದು ಯೋಚನೆ ಮಾಡಬೇಕಯ್ಯ
ದಾಸ್ಯದ, ಲಂಚದ ಬದುಕು ಸಾಕಯ್ಯ
ಸದೃಢ ದೇಶಾಭಿಮಾನಿ ಬೇಕಯ್ಯ
ನೀ ತಿಳಿ ಮತದಾನ ಬಹು ಶ್ರೇಷ್ಠವು
ನಾವು ನೀಡುವ ಮತವು ಯಾರಿಗೆಂದು
ಪ್ರಜಾ ಪ್ರಭುತ್ವದ ಮಹತ್ವದ ಅರಿವು ಅರಿತವರು ಬೇಕು
ಮತದಾನವಂತೂ ಖಡ್ಡಾಯ ಮಾಡಲೇಬೇಕು.
ಮಳೆಬಿಲ್ಲು ಸಾಹಿತಿ ಲೀಲಾ ಗುರುರಾಜ್, ತುಮಕೂರು