
ಮೂಡಲಗಿ : ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಮಳೆಗಾಳಿಗೆ ಮರ ಬಿದ್ದು ಆಕಳು ಸಾವಿಗೀಡಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಗುರುವಾರ ಸಂಜೆ 5ಗಂಟೆ ಸುಮಾರಿಗೆ ಗುಡುಗು ಸಿಡಿಲಿನೊಂದಿಗೆ ಸುರಿದ ಮಳೆಯೊಂದಿಗೆ, ರಭಸವಾಗಿ ಬೀಸಿದ ಗಾಳಿಗೆ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ನನಾರಿ ತೋಟದ ನಿವಾಸಿ ಶಂಕರ ಕೆಂಪಣ್ಣ ಹಮ್ಮನ್ನವರ ಎಂಬುವವರ ಮನೆಯ ಅಂಗಳದಲ್ಲಿ ಕಟ್ಟಿರುವ ಆಕಳ ಮೇಲೆ ಮರ ಬಿದ್ದು ಸ್ಥಳದಲ್ಲಿ ಆಕಳು ಸಾವಿಗೆಡಾಗಿದೆ.
ಘಟನಾ ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Ad9 News Latest News In Kannada