Breaking News
Home / ಬೆಂಗಳೂರು ನಗರ / ಸಂಪುಟ ವಿಸ್ತರಣೆಯ ಸಂಭಾವ್ಯ ಪಟ್ಟಿ: ಯಾರಿಗೆ ಯಾವ ಖಾತೆ?

ಸಂಪುಟ ವಿಸ್ತರಣೆಯ ಸಂಭಾವ್ಯ ಪಟ್ಟಿ: ಯಾರಿಗೆ ಯಾವ ಖಾತೆ?

Spread the love

          ಬೆಂಗಳೂರು, ಜನವರಿ 18: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಿದ್ಧಪಡಿಸಿದ್ದಾರೆ ಎನ್ನಲಾದ ಸಚಿವರ ಪಟ್ಟಿ ಅಂತಿಮಗೊಂಡರೆ ಉಪ ಚುನಾವಣೆಯಲ್ಲಿ ಜಯಗಳಿಸಿದ 7 ಶಾಸಕರ ಜತೆಗೆ 2018ರ ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷದ ಇಬ್ಬರು ಶಾಸಕರು ಯಡಿಯೂರಪ್ಪ ಸಂಪುಟ ಸೇರ್ಪಡೆಯಾಗುವುದು ಖಚಿತ. ಸಂಪುಟಕ್ಕೆ ಸೇರ್ಪಡೆಯಾಗುವ ಶಾಸಕರ ಜತೆಗೆ ಅವರಿಗೆ ಯಾವ ಖಾತೆಗಳನ್ನು ನೀಡಬೇಕು ಎನ್ನುವುದನ್ನು ಕೂಡ ಅಮಿತ್ ಶಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

      ಉಪ ಚುನಾವಣೆಯಲ್ಲಿ ಗೆದ್ದ 11 ‘ಅರ್ಹ’ ಶಾಸಕರಲ್ಲಿ ಏಳು ಮಂದಿಗೆ ಮಾತ್ರ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡಲು ಅಮಿತ್ ಶಾ ಬಯಸಿದ್ದಾರೆ.  ಅವರ ಜತೆಗೆ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೂ ಸಚಿವ ಸ್ಥಾನ ನೀಡಲು ಉದ್ದೇಶಿಸಿದ್ದಾರೆ. ಅವರಿಗೆ ನಿರ್ದಿಷ್ಟ ಖಾತೆಗಳನ್ನೂ ಅವರು ಅಂತಿಮಗೊಳಿಸಿದ್ದಾರೆ. ಆದರೆ ಯಡಿಯೂರಪ್ಪ ಅವರ ಪಟ್ಟಿಯೇ ಬೇರೆ ಇದೆ.

    ಎಲ್ಲ 11 ಅರ್ಹ ಶಾಸಕರಿಗೂ ಈಗ ಸಚಿವ ಸ್ಥಾನ ನೀಡಲೇಬೇಕು ಎಂದು ಯಡಿಯೂರಪ್ಪ ಬಯಸಿದ್ದಾರೆ. ಅದರ ಜತೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾದ ಉಮೇಶ್ ಕತ್ತಿ, ವಿ. ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ, ಎಸ್. ಅಂಗಾರ, ದತ್ತಾತ್ರೇಯ ಪಾಟೀಲ ರೇವೂರ, ಎ.ರಾಮದಾಸ್, ಅಪ್ಪಚ್ಚು ರಂಜನ್ ಅವರ ಹೆಸರನ್ನೂ ನಮೂದಿಸಿದ್ದಾರೆ. ಆದರೆ ಇವರೆಲ್ಲರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಅಮಿತ್ ಶಾ ಒಪ್ಪುತ್ತಾರೆಯೇ ಎನ್ನುವ ಪ್ರಶ್ನೆ ಇದೆ.

ರಮೇಶ್ ಜಾರಕಿಹೊಳಿಗೆ ಆದ್ಯತೆ ಅಮಿತ್ ಶಾ ಸಿದ್ಧಪಡಿಸಿರುವ ಒಟ್ಟು ಒಂಬತ್ತು ಶಾಸಕರ ಪಟ್ಟಿಯಲ್ಲಿ, ಸಮ್ಮಿಶ್ರ ಸರ್ಕಾರದ ಪತನದ ವೇಳೆ ಎಲ್ಲ ಶಾಸಕರ ನೇತೃತ್ವ ವಹಿಸಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಹೆಚ್ಚು ಆದ್ಯತೆ ಸಿಗಲಿದೆ. ರಮೇಶ್ ಜಾರಕಿಹೊಳಿ ಬಯಸಿರುವ ಜಲಸಂಪನ್ಮೂಲ ಖಾತೆಯೇ ಅವರಿಗೆ ಸಿಗಲಿದೆ. ಜತೆಗೆ ಉಪ ಮುಖ್ಯಮಂತ್ರಿ ಹುದ್ದೆಯೂ ಅವರಿಗೆ ಒಲಿಯಲಿದೆ ಎನ್ನಲಾಗಿದೆ.

 

            ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ * ಕೆ.ಆರ್ ಪುರ ಶಾಸಕ ಬೈರತಿ ಬಸವರಾಜ್- ಕಾರ್ಮಿಕ ಮತ್ತು ಕೌಶಲಾಭಿವೃದ್ಧಿ ಖಾತೆ * ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ-ಪೌರಾಡಳಿತ * ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್- ವೈದ್ಯಕೀಯ ಶಿಕ್ಷಣ, ಯುವಜನಸೇವೆ ಮತ್ತು ಕ್ರೀಡೆ

 

ನಾರಾಯಣಗೌಡಗೆ ತೋಟಗಾರಿಕೆ * ಹಿರೇಕೆರೂರು ಶಾಸಕ ಬಿಸಿ ಪಾಟೀಲ್- ಆಹಾರ, ನಾಗರಿಕ ಪೂರೈಕೆ ಮತ್ತು ಬಂದಿಖಾನೆ * ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್- ನಗರಾಭಿವೃದ್ಧಿ ಖಾತೆ * ಕೆಆರ್ ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ- ತೋಟಗಾರಿಗೆ,    ಸಕ್ಕರೆ ಮತ್ತು ಸಣ್ಣ ಕೈಗಾರಿಕೆ.

               ಉಮೇಶ್ ಕತ್ತಿ, ಲಿಂಬಾವಳಿ ಅಮಿತ್ ಶಾ ಪಟ್ಟಿಯಲ್ಲಿ ಇರುವ ಇನ್ನೆರಡು ಹೆಸರಾದ ಉಮೇಶ್ ಕತ್ತಿ ಮತ್ತು ಅರವಿಂದ್ ಲಿಂಬಾವಳಿ ಅವರಿಗೆ, ಹಾಲಿ ಸಚಿವರಲ್ಲಿನ ಖಾತೆಗಳಲ್ಲಿ ಬದಲಾವಣೆ ಮಾಡಿ ಖಾತೆ ಹಂಚುವ ಕುರಿತು ಅಮಿತ್ ಶಾ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.


Spread the love

About Ad9 Haberleri

Check Also

ಅಸೋಷಿಯೇಷನ್ ವತಿಯಿಂದ ಸಚಿವರಿಗೆ ಸನ್ಮಾನ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್

Spread the love ಅಖಿಲಕರ್ನಾಟಕ ಫೈನಾನ್ಸಿಯರ್ಸ್ ಅಸೋಷಿಯೇಷನ್ ನಿಂದ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು ದಿನಾಂಕ 5-3-2020 ರಂದು ಸಹಕಾರ …