*ಪ್ರತಿಭಾವಂತ ಪ್ರವೀಣ ನವಣಿ ವಿದ್ಯಾರ್ಥಿಯ ಹುಟ್ಟು ಹಬ್ಬ ಆಚರಣೆ*
ಮೂಡಲಗಿ:ಇಲ್ಲಿಯ ಶ್ರೀ ಶ್ರೀನಿವಾಸ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಪ್ರವೀಣ ನವಣಿ ಈತನ ಹುಟ್ಟು ಹಬ್ಬವನ್ನು ಶಾಲಾ ಆವರಣದಲ್ಲಿ ಪೇರಲ ಸಸಿ ನೆಟ್ಟು ವಿಭಿನ್ನವಾಗಿ ಆಚರಿಸಿದರು.
ಶುಕ್ರವಾರ ವಿದ್ಯಾರ್ಥಿಯ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮನೋಜ ಭಟ್ಟ ಮಾತನಾಡಿ, ವಿದ್ಯಾರ್ಥಿಗಳ ಹುಟ್ಟು ಹಬ್ಬದಂದು ಶಾಲೆಗಳಲ್ಲಿ ಆಚರಿಸಬೇಕು ಇದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಪರಿಸರ ಮತ್ತು ಹಸಿರು ಕ್ರಾಂತಿಯ ಪ್ರಜ್ಞೆ ಮೂಡುವುದು. ಆದ್ದರಿಂದ ಪ್ರತಿ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದಂದು ಗಿಡಗಳನ್ನು ನೆಟ್ಟು, ಪೋಸಿಸುವ ರೂಡಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಶಾಲಾ ಗ್ರಂಥಾಲಯಕ್ಕೆ ಉತ್ತಮ ಪುಸ್ತಕ ನೀಡಿ, ಸಿಹಿ ವಿತರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ,ಸಮಾಜ ಸೇವಕ ಈರಪ್ಪ ಢವಳೇಶ್ವರ, ಈಶ್ವರ ಢವಳೇಶ್ವರ,ನಾರಾಯಣ ರೇಳೆಕರ,ವೆಂಕಟೇಶ ಸೋರಗಾಂವಿ,ಶಾಲಾ ಶಿಬ್ಬಂದಿ ವರ್ಗ,ವಿದ್ಯಾರ್ಥಿಗಳು ಇದ್ದರು.