ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ರವಿವಾರ ಸಂಜೆ ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 14.38 ಲಕ್ಷ ರೂಪಾಯಿಗಳ …
Read More »ಎನ್ಎಸ್ಎಫ್ ಕಚೇರಿಯಲ್ಲಿ ನಾಗಪ್ಪ ( ನಾಗ ದೇವತೆ) ನಿಗೆ ಹಾಲೇರೆದ ಶಾಸಕ ಬಾಲಚಂದ್ರ ಜಾರಕಿಹೊಳಿ
*ಗೋಕಾಕ-* ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬವಾಗಿರುವ ನಾಗರ ಪಂಚಮಿ ಹಬ್ಬದ ಹಿಂದಿನ ದಿನ ಸಹೋದರಿಯರು ನಾಗ ದೇವತೆಗೆ ಪ್ರಾರ್ಥಿಸಿಕೊಂಡು ತಮ್ಮ ಸಹೋದರರಿಗೆ ರಕ್ಷಣೆ ಸಿಗಲೆಂದು ಹರಕೆ ಹೊರುವ ಪ್ರತೀತಿ ಇಂದಿಗೂ ಪ್ರಸ್ತುತವಿದೆ ಎಂದು ಅರಭಾವಿ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಗುರುವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ನಾಗರ ಪಂಚಮಿ ನಿಮಿತ್ತ ನಾಗ ದೇವತೆಗೆ ಪೂಜೆ ಸಲ್ಲಿಸಿದ ಅವರು, ತವರು ಮನೆಗಳಿಗೆ ಹೆಣ್ಣು ಮಕ್ಕಳನ್ನು ಬರಮಾಡಿಕೊಂಡು ಅವರಿಗೆ …
Read More »ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಮಂಗಳವಾರದಂದು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅರಭಾವಿ ಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿಜಿ, ವಡೇರಹಟ್ಟಿ ಮತ್ತು ಮುಸಗುಪ್ಪಿ ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲಿರುವ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮಳೆಯ ಪ್ರಮಾಣ ಸದ್ಯಕ್ಕೆ ಇಳಿಕೆಯಾಗುತ್ತಿದೆ. ಪ್ರವಾಹದಿಂದ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತುಂಬ ತೊಂದರೆಯಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ …
Read More »ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ನದಿ ತೀರದ ಸಂತ್ರಸ್ತರು ಯಾವ ಕಾರಣಕ್ಕೂ ಆತಂಕ ಮಾಡ್ಕೊಬೇಡಿ. ಧೈರ್ಯದಿಂದ ಇರಿ. ಸದಾ ನಾವು ನಿಮ್ಮೊಂದಿಗೆ ಇದ್ದೇವೆ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾ ನದಿ ತೀರದ ಸಂತ್ರಸ್ತರ ಬಗ್ಗೆ ಕಾಳಜಿ- ಕನಿಕರ ಭಾವನೆಗಳನ್ನು ಹೊಂದಿದ್ದಾರೆ. ಪ್ರವಾಹದಿಂದ ನದಿ ತೀರದ ಗ್ರಾಮಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಸಂತ್ರಸ್ತರಿಗೆ ಅನುಕೂಲವಾಗಲು ಅವರನ್ನು …
Read More »ಅಭಿವೃದ್ಧಿಗೆ ಪೂರಕವಾದ ಕೇಂದ್ರ ಬಜೆಟ್, ಆರ್ಥಿಕ ಸುಧಾರಣೆಗೆ ಹೆಚ್ಚಿನ ಒತ್ತು- ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಜನ ಮತ್ತು ತೆರಿಗೆ ಸ್ನೇಹಿ ಆಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬಜೆಟ್ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿ, ಹೊಸ ರೈಲ್ವೆ ಯೋಜನೆಗಳ ಘೋಷಣೆ, ಹೈದರಾಬಾದ್ ಬೆಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ 100 ಆಯ್ದ ನಗರಗಳಲ್ಲಿ ಫುಡ್ ಸ್ಟ್ರೀಟ್ …
Read More »ಮನ್ನಿಕೇರಿಯಲ್ಲಿ ₹ ೨೫ ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
ಮನ್ನಿಕೇರಿ (ತಾ. ಗೋಕಾಕ)- ಸಾರ್ವಜನಿಕ ಸಂಚಾರಕ್ಕೆ ಅಗತ್ಯವಿರುವ ಮನ್ನಿಕೇರಿಯಿಂದ ಬೆಟಗೇರಿ ಮತ್ತು ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟಾರೆ ೨೫ ಕೋ. ರೂ. ಮಂಜೂರಾಗಿದ್ದು, ನಿಗದಿತ ಅವಧಿಯೊಳಗೆಯೇ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು. ಕೌಜಲಗಿ ಸಮೀಪದ ಮನ್ನಿಕೇರಿ ಗ್ರಾಮದ ಹತ್ತೀರ ರವಿವಾರದಂದು ಜರುಗಿದ ಲೋಕೋಪಯೋಗಿ ಇಲಾಖೆಯ ಎಸ್ಎಚ್ಡಿಪಿ ೫ ನೇ ಹಂತದ ಯೋಜನೆಯ ೧೩ ಕೋ. ರೂ. ವೆಚ್ಚದ …
Read More »ಗಿಡ- ಮರಗಳನ್ನು ಉಳಿಸಿ- ಬೆಳೆಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ
*ಗೋಕಾಕ*- ಅರಣ್ಯ ಉಳಿಯಬೇಕಾದರೆ ಗಿಡ- ಮರಗಳನ್ನು ನೆಟ್ಟು ಅರಣ್ಯವನ್ನು ಬೆಳೆಸಬೇಕೆಂದು ಅರಭಾವಿ ಶಾಸಕ, ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಮ್ಮ ತಾಯಿಯ ಸ್ಮರಣಾರ್ಥವಾಗಿ ನಗರದ ಎನ್ಎಸ್ಎಫ್ ಆವರಣದಲ್ಲಿ “ಏಕ ಪೇಡ್ ಮಾ ಕೆ ನಾಮ” ಅಭಿಯಾನದ ನಿಮಿತ್ತ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಣ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯು ನಮ್ಮ ಮೇಲಿದೆ ಎಂದು ತಿಳಿಸಿದರು. …
Read More »ಅಂಬೇಡ್ಕರ್ ವಿಶ್ವರತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ಅಸ್ಪೃಶ್ಯತೆ ನಿವಾರಣೆಗಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಪುರುಷರು ಅಂಬೇಡ್ಕರ್ ಆಗಿದ್ದರು ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ರವಿವಾರದಂದು ನಗರದ ಎನ್ಎಸ್ಎಫ್ ಕಛೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೩ ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲಿಯೇ ಅತೀ ದೊಡ್ಡದಾದ ಸಂವಿಧಾನವನ್ನು ರಚಿಸಿದ …
Read More »ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ:ಜಗದೀಶ ಶೆಟ್ಟರ್
ಗೋಕಾಕ: ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಾಥಮಿಕ ಹಂತವಾಗಿ ಮಠ-ಮಾನ್ಯಗಳು, ಜಿಲ್ಲೆಯ ಪ್ರಮುಖ ಮುಖಂಡರನ್ನು ಸಮಕ್ಷಮ ಭೇಟಿ ಮಾಡಿ ಬೆಂಬಲ ಕೋರುತ್ತಿರುವದಾಗಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು. ರವಿವಾರದಂದು ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ …
Read More »ಒಕ್ಕಲುತನ ಹುಟ್ಟುವಳಿ ಸಂಘದ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಬ್ಬೂರ್ ಆಯ್ಕೆ
ಗೋಕಾಕ: ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ, ಬೆಳಗಾವಿ ಜಿಲ್ಲೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಮಲ್ಲಿಕಾರ್ಜುನ ಭೀಮಪ್ಪಾ ಕಣ್ಣೂರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ಗ್ರಾಮದ ರಂಗಾಪೂರ ಮಲ್ಲಿಕಾರ್ಜುನ ಭೀಮಪ್ಪಾ ಕಬ್ಬೂರ್ ಇವರನ್ನು ಅಧಿಕಾರೇತರ ಸದ್ಯಸರಾಗಿ ಆಯ್ಕೆ ಮಾಡಿ ಸರ್ಕಾರ ಆದೇಶಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಅವರ ಪ್ರಯತ್ನದಿಂದ ಒಕ್ಕಲುತನ ಹುಟ್ಟುವಳಿ ಸಂಘಕ್ಕೆ …
Read More »