ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನೂತನವಾಗಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆ ಯಾದ ವಿಠ್ಠಲ ಹೊಸಮನಿ ಅವರಿಗೆ ಸಾಯಿ ಬ್ಯಾಂಕ್ ಅಧ್ಯಕ್ಷ ಮರಿಯೆಪ್ಪ ಮರಿಯೆಪ್ಪಗೊಳ ಸನ್ಮಾನ ಮಾಡಿ ಮಾತನಾಡಿ ವಿಠ್ಠಲ ಹೋಸಮಣಿ ಅವರು ತುಂಬಾ ವರ್ಷ ಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾ ಬಂದವರು ಇವರು ಎಲ್ಲಾ ಸಮಾಜದ ಜೊತೆ ಸಹೋದರಂತೆ ಒಡನಾಟ ಇಟ್ಟವರು ಇವರು ಕಾಂಗ್ರೆಸ್ ಪಕ್ಷಕಾಗಿ ನಿಷ್ಠೆ ಯಿಂದ ದುಡಿದವರು ಇವರ ಪಕ್ಷ ನಿಷ್ಠೆ ಹಾಗೂ ಕೆಲಸ ಕಾರ್ಯವನ್ನು ನೋಡಿ ಇವರಿಗೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನೂತನವಾಗಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆಎಂದು ಮಾತನಾಡಿದ್ದರು.
ಈ ಸಂದರ್ಭದಲ್ಲಿ ರಮೇಶ್ ಸಣ್ಣಕ್ಕಿ, ಹಣಮಂತ ಹವಳೆವ್ವಗೋಳ, ಲಕ್ಷ್ಮಣ ಮೆಳ್ಳಿಗೇರಿ , ಯಾಕೋಬ ಸಣ್ಣಕ್ಕಿ, ಶಿವಭಸು ಹವಳೆವ್ವಗೋಳ, ಸುನೀಲ್ ಗಸ್ತಿ, ಪೀಟರ್ ತೊಂಡಿಕಟಿ, ಸತೀಶ್ ಗಸ್ತಿ, ಭೀಮಶಿ ತಳವಾರ ಉಪಸ್ಥಿತರಿದ್ದರು.