Breaking News

ಬಿಜೆಪಿ ಹೈ ಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯನ್ನು ಎದುರಿಸೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

*ಬಿಜೆಪಿ ಟಿಕೆಟ್ ಯಾರಿಗೆ ನೀಡಿದ್ರೂ ಅವರ ಗೆಲುವಿಗೆ ಶ್ರಮಿಸುತ್ತೇವೆ.*

ಮೂಡಲಗಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯು ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಗುರುವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಕಲ್ಲೋಳಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾ ಗೃಹದಲ್ಲಿ ಜರುಗಿದ ಅರಭಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನಾಯಕರು ಬಿಜೆಪಿ ಹೈಕಮಾಂಡ್ ನಿರ್ಣಯಕ್ಕೆ ಬದ್ದರಾಗಿ ಚುನಾವಣೆಯ ಕೆಲಸ ಮಾಡೋಣವೆಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಮತ್ತೋಮ್ಮೆ ಪ್ರಧಾನ ಮಂತ್ರಿಯಾಗಬೇಕೆಂಬುವದು ಇಡೀ ದೇಶದ ಜನರ ಸಂಕಲ್ಪವಾಗಿದೆ. ನಮ್ಮ ಗುರಿ ಮತ್ತೋಮ್ಮೆ ಮೋದಿಯವರು ಪ್ರಧಾನಿಯಾಗಬೇಕು. ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು. ಈ ನಿಟ್ಟಿನಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಅರಳಬೇಕು. ಅಭ್ಯರ್ಥಿ ಯಾರೇ ಕಣಕ್ಕಿಳಿದರೂ ಪಕ್ಷದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳ ಮುಖಂಡರುಗಳು ಒಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಬೇಕು. ನಮಗೆ ಅಭ್ಯರ್ಥಿ ಯಾರು ಆಗುತ್ತಾರೆಂಬುವದು ಮುಖ್ಯವಲ್ಲ. ಅಭ್ಯರ್ಥಿ ಪರ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ. ಮತ್ತೋಮ್ಮೆ ಬಿಜೆಪಿ ಬಾವುಟವನ್ನು ಹಾರಿಸುವ ಮೂಲಕ ಮೋದಿಯವರ ಕೈ ಬಲಪಡಿಸೋಣ ಎಂದು ತಿಳಿಸಿದರು.
ಮೆ-7ರಂದು ನಡೆಯುವ ದ್ವಿತೀಯ ಹಂತದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಲ್ಲೋಳಿಯಿಂದಲೇ ಪ್ರಚಾರ ಕಾರ್ಯ ನಡೆದಿರುವುದು ಸಂತಸ ಮೂಡಿಸಿದೆ. ಈಗಿರುವ ಬೂತಮಟ್ಟದ ಕಾರ್ಯಕರ್ತರ ಯಾದಿಯನ್ನು ಪರಿಷ್ಕರಣೆ ಮಾಡಿ ಗೆಲುವಿಗೆ ಸುಗಮ ಹಾದಿಯನ್ನು ಹುಡುಕಬೇಕು. ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ನಿಯೋಜನೆ ಮಾಡಿ ಅಭ್ಯರ್ಥಿಯ ಗೆಲುವಿಗೆ ಮುನ್ನುಡಿ ಬರೆಯಬೇಕು. ಕಾರ್ಯಕರ್ತರಿಂದಲೇ ಬಿಜೆಪಿಯು ವಿಶ್ವದಾದ್ಯಂತ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಹೇಳಿದರು.
ಪಂ. ಜವಾಹರಲಾಲ ನೆಹರು ಅವರು ಪ್ರಧಾನಿಯಾಗಬೇಕೆಂಬ ಏಕಮೇವ ಉದ್ದೇಶದಿಂದ ಭಾರತವನ್ನು ಇಬ್ಭಾಗ ಮಾಡಿದರು. ಭಾರತವು ಇರಾನ ದೇಶದವರಿಗೆ ವಿಸ್ತ್ರರಣೆಯಿತ್ತು. ಪಾಕಿಸ್ತಾನ, ಬಾಂಗ್ಲಾ, ದೇಶಗಳನ್ನು ನಮ್ಮ ದೇಶದಿಂದ ಒಡೆದು ಭಾರತೀಯರ ಮನಸ್ಸುಗಳನ್ನು ಕೆಡಿಸಿದರು. ಹಿಂದು-ಮುಸ್ಲಿಂ ಬಾಂಧವರಲ್ಲಿ ಮತೀಯ ಕಿಚ್ಚು ಹಚ್ಚುತ್ತಿರುವ ಕಾಂಗ್ರೇಸ್ ಪಕ್ಷದ ಸ್ಥೀತಿ ಏನಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಆದರೇ ಪ್ರಧಾನಿ ನರೇಂದ್ರ ಮೋದಿಯವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎನ್ನುವ ಧ್ಯೇಯದೊಂದಿಗೆ ಇಡೀ ದೇಶದಲ್ಲಿರುವ ಎಲ್ಲ ಸಮುದಾಯಗಳ ಜನರ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆಂದು ಅವರು ಶ್ಲಾಘಿಸಿದರು.

*ನಾನೂ ಟಿಕೆಟ್‌ ಆಕಾಂಕ್ಷಿ-*
*ನನಗೂ ಸಂಸದನಾಗಬೇಕೆನ್ನುವ ಆಸೆಯಿದೆ*
*ಎಲ್ಲವೂ ದೇವರಿಚ್ಛೆ- ಸಂಜಯ ಪಾಟೀಲ*

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ಈ ಹಿಂದೆ ಶಾಸಕನಾಗಿ ಕೆಲಸ ಮಾಡಿದ್ದೇನೆ. ಪಕ್ಷ ಯಾರಿಗೆ ಟಿಕೇಟ್ ನೀಡಿದರೂ ಶಿಸ್ತಿನ ಸಿಪಾಯಿಯಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ನನಗೂ ಸಂಸದನಾಗಬೇಕೆಂಬ ಆಕಾಂಕ್ಷೆ ಇದೆ. ಆದರೇ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುವೆ. ಆದರೆ ನನ್ನ ಉಸಿರು ಇರುವ ತನಕ ಬಿಜೆಪಿ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಲಾರೆ. ಅಧಿಕಾರದ ಲಾಲಸೆಗಾಗಿ ಕೆಟ್ಟ ದುರಾಲೋಚನೆ ಮಾಡಲಾರೆ. ದೇಶಭಕ್ತ ಪಕ್ಷವಾಗಿರುವ ಬಿಜೆಪಿಯು ನನ್ನ ಉಸಿರು ಎಂದು ಹೇಳಿದ ಅವರು, ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಈ ಚುನಾವಣೆಯಲ್ಲಿ ಸುಮಾರು 1.40 ಲಕ್ಷ ಮತಗಳ ಮುನ್ನಡೆಯನ್ನು ಪಕ್ಷದ ಅಭ್ಯರ್ಥಿಗೆ ನೀಡಲಿದ್ದಾರೆ. ಇವರುಗಳು ಬಿಜೆಪಿ ಆಸ್ತಿಯೆಂದು ಬಣ್ಣಿಸಿದರು.
ಬೆಳಗಾವಿ(ಗ್ರಾ) ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಟ್ಟುಕೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ದುಡಿಯಬೇಕು. ಅರಭಾವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಅಭ್ಯರ್ಥಿಗೆ ಹೆಚ್ಚಿನ ಮುನ್ನಡೆ ಮತಗಳನ್ನು ನೀಡೋಣವೆಂದು ತಿಳಿಸಿದರು.
ವೇದಿಕೆಯಲ್ಲಿ ಜಯಪ್ರಕಾಶ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಲಕ್ಷ್ಮಣ ತಪಸಿ, ಡಾ|| ಕೆ.ವಿ.ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಮುತ್ತೆಪ್ಪ ಮನ್ನಾಪೂರ, ರಾಮಣ್ಣ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಸುಭಾಶ ಕುರಬೇಟ, ಹಣಮಂತ ಗುಡ್ಲಮನಿ, ಪರಸಪ್ಪ ಬಬಲಿ, ಶಿವಾನಂದ ಕಮತಿ, ಮುತ್ತೆಪ್ಪ ಕುಳ್ಳೂರ, ಇಂದಿರಾ ಅಂತರಗಟ್ಟಿ, ಬಿ.ಬಿ.ದಾಸನವರ, ಮಲ್ಲಪ್ಪ ಹೆಬ್ಬಾಳ, ಮಹಾಂತೇಶ ಕುಡಚಿ, ಅನ್ವರ ನದಾಫ, ವಸಂತ ತಹಶಿಲ್ದಾರ, ಪರಪ್ಪ ಕಡಾಡಿ, ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.
ನಂತರ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯನ್ನು ಪಕ್ಷದ ಮುಖಂಡರು ನಡೆಸಿದರು.


Spread the love

About Ad9 News

Check Also

ಮಲ್ಲಿಕಾರ್ಜುನ ಕಬ್ಬೂರ್ ಅವರಿಗೆ ಸಾಯಿ ಬ್ಯಾಂಕ್ ಅಧ್ಯಕ್ಷ ಮರಿಯಪ್ಪಗೋಳ ಅವರಿಂದ ಸನ್ಮಾನ

Spread the love ಮೂಡಲಗಿ : ಪಟ್ಟಣದ ಸಾಯಿ ಬ್ಯಾಂಕ್ ನಲ್ಲಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ …

Leave a Reply

Your email address will not be published. Required fields are marked *