Breaking News

ದೇಶದಲ್ಲಿ ಒಂದು ದಿನದಲ್ಲೇ 8,329 ಹೊಸ ಕೋವಿಡ್ ಪ್ರಕರಣ ಪತ್ತೆ

Spread the love

ನವದೆಹಲಿ – : ದೇಶದಲ್ಲಿ ಒಂದು ದಿನದಲ್ಲೇ 8,329 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ 103 ದಿನಗಳಲ್ಲೇ ವರದಿಯಾದ ಅತಿ ಹೆಚ್ಚು ಪ್ರಕರಣಗಳು ಇವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ಶನಿವಾರ ಹೇಳಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 40,370 ಕ್ಕೆ ಏರಿಕೆಯಾಗಿದೆ

ಈ ಮೂಲಕ ಭಾರತದಲ್ಲಿ ಕೋವಿಡ್ ಸೋಂಕು 4,32,13,435 ಆಗಿದೆ ಎಂದೂ ದತ್ತಾಂಶ ತಿಳಿಸಿದೆ. 10 ಕೋವಿಡ್ ಸಾವಿನೊಂದಿಗೆ ಮರಣ ಸಂಖ್ಯೆ 5,24,757ಕ್ಕೆ ತಲುಪಿದೆ. ಕೋವಿಡ್ ಚೇತರಿಕೆ ಪ್ರಮಾಣ ಶೇ. 98.69 ರಷ್ಟಿದೆ ಎಂದು ಸಚಿವಾಲಯ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣ 4,103ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನದಡಿ ಇದುವರೆಗೆ 194.92 ಕೋಟಿ ಲಸಿಕೆಯ ಡೋಸ್ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.


Spread the love

About Ad9 News

Check Also

ಯೂಟ್ಯೂಬ್ ವೀಡಿಯೊ ನೋಡಿ ಹೆರಿಗೆ

Spread the loveಮಲಪ್ಪುರಂ : ಕೇರಳದ ಮಲಪ್ಪುರಂನ ಕೊಟ್ಟಕ್ಕಲ್ ನಲ್ಲಿ 17 ವರ್ಷದ ಬಾಲಕಿಯೊಬ್ಬಳು ಅಕ್ಟೋಬರ್ 20 ರಂದು ತನ್ನ …

Leave a Reply

Your email address will not be published. Required fields are marked *