Breaking News

ಅರುಣ ಶಹಾಪೂರ-ಹನಮಂತ ನಿರಾಣ ಪರ ಬಿರುಸಿನ ಪ್ರಚಾರ ಕೈಗೊಂಡಿರುವ ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ

Spread the love


ಮೂಡಲಗಿ : ಜೂನ್ 13 ರಂದು ನಡೆಯುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆ ನಿಮಿತ್ಯ ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಕ್ಷೇತ್ರಾದ್ಯಂತ ಅವರ ಆಪ್ತ ಸಹಾಯಕರುಗಳು ಹಾಗೂ ಪಕ್ಷದ ಪದಾಧಿಕಾರಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಚನ್ನಮಲ್ಲಿಕಾರ್ಜುನ ಯಕ್ಷಂಬಿ ಮತ್ತು ದಾಸಪ್ಪ ನಾಯಿಕ ಅವರು ಅರಭಾವಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚಿಸಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಾಪೂರ ಮತ್ತು ಪದವೀಧರ ಕ್ಷೇತ್ರದಿಂದ ಹನಮಂತ ನಿರಾಣ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಆಯ್ಕೆ ಮಾಡುವಂತೆ ಇದೇ ಸಂದರ್ಭದಲ್ಲಿ ಅವರು ಕೋರಿಕೊಂಡಿದ್ದಾರೆ.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಮಹಾಂತೇಶ ಕುಡಚಿ, ಪರಸಪ್ಪ ಬಬಲಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ತಮ್ಮಣ್ಣ ದೇವರ, ಪ್ರಮೋದ ನುಗ್ಗಾನಟ್ಟಿ, ಸಂಗಣ್ಣ ಕಂಟಿಕಾರ, ಇಕ್ಬಾಲ್ ಸರ್ಕಾವಸ್, ವಾಸಂತಿ ತೇರದಾಳ, ನಾಗರಾಜ ಕುದರಿ, ಯಲ್ಲಾಲಿಂಗ ವಾಳದ, ಹಾಗೂ ಮುಖಂಡರಾದ ಮುತ್ತೆಪ್ಪ ಕುಳ್ಳೂರ, ಹನಮಂತ ತೇರದಾಳ, ರವಿ ಪರುಶೆಟ್ಟಿ, ಸಂಜಯ ಹೊಸಕೋಟಿ, ವಿಠ್ಠಲ ಪಾಟೀಲ, ಶಿವು ಕಮತಿ, ನ್ಯಾಯವಾದಿ ಅಡಿವೆಪ್ಪ ಬಿಲಕುಂದಿ, ಮುತ್ತೆಪ್ಪ ಮನ್ನಾಪೂರ, ಮುಂತಾದವರು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.


Spread the love

About Ad9 News

Check Also

ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು …

Leave a Reply

Your email address will not be published. Required fields are marked *