Breaking News
Home / ರಾಷ್ಟ್ರೀಯ / ವಿಶ್ವದ ಶ್ರೀಮಂತ ದೇಗುಲ ತಿರುಪತಿಯಲ್ಲಿ ಮಾರ್ಚ್ 1 ರಿಂದ ಫೇಸ್ ರೇಕಗ್ನಿಷನ್ ವ್ಯವಸ್ಥೆ ಜಾರಿ

ವಿಶ್ವದ ಶ್ರೀಮಂತ ದೇಗುಲ ತಿರುಪತಿಯಲ್ಲಿ ಮಾರ್ಚ್ 1 ರಿಂದ ಫೇಸ್ ರೇಕಗ್ನಿಷನ್ ವ್ಯವಸ್ಥೆ ಜಾರಿ

Spread the love

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 1 ರಿಂದ ಫೇಶಿಯಲ್ ರೇಕಗ್ನಿಷನ್ ವ್ಯವಸ್ಥೆ ಜಾರಿಗೆ ತರಲು ಟಿಟಿಡಿ ಕ್ರಮಕೈಗೊಂಡಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಟೋಕನ್ ವಿತರಣೆ, ಲಡ್ಡು ವಿತರಿಸುವ ಸ್ಥಳಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುವುದು.

ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ದೇವಾಲಯದಲ್ಲಿ ಟೋಕನ್ ಇಲ್ಲದೆ ದರ್ಶನ ಪಡೆಯುವ ಸ್ಥಳ, ಹೆಚ್ಚಿನ ಟೋಕನ್ ವಿತರಿಸುವ ಸ್ಥಳ, ಲಡ್ಡು ವಿತರಣೆ ಸ್ಥಳ, ಕೊಠಡಿ ಹಂಚಿಕೆ, ಹಣ ಮರುಪಾವತಿ ಮೊದಲಾದ ಕಡೆಗಳಲ್ಲಿ ಫೇಸ್ ರೇಕಗ್ನಿಷನ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ.

ಕೆಲವರು ಪದೇ ಪದೇ ಟೋಕನ್, ಲಡ್ಡು ಪಡೆಯುವ ಮೂಲಕ ಭಕ್ತಾದಿಗಳಿಗೆ ತೊಂದರೆ ಕೊಡುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


Spread the love

About Ad9 Haberleri

Check Also

ಮಕ್ಕಳು ಹೆಲ್ಮೆಟ್ ಧರಿಸುವುದು ಕಡ್ಡಾಯ

Spread the loveನವದೆಹಲಿ: ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ …

Leave a Reply

Your email address will not be published. Required fields are marked *