Breaking News

ಈಗಾಗಲೇ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ

Spread the love

 

ಮುಂದಿನ ದಿನಗಳಲ್ಲಿ ಈ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತೆ ಎನ್ನಲಾಗುತ್ತಿದೆ. ಇದೆಲ್ಲಾ ಕೇವಲ ಊಹಾಪೋಹಗಳಾ ಅಥವಾ ಸತ್ಯವಾ? ಈರುಳ್ಳಿಯ ಧಾರಣೆಯ ಬಗ್ಗೆ ಮಾಹಿತಿ ತಿಳಿಯೋಣ

 

ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಹೋಲಿಸಿದ್ರೆ ಈರುಳ್ಳಿಯ ಬೆಲೆಗಳು ಈಗ ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಈ ಬೆಲೆಗಳು ಡಬಲ್ ಅಂದರೆ ದುಪ್ಪಟ್ಟಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುತ್ತದೆ ಕ್ರಿಸಿಲ್ ಎನ್ನುವ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ ರಾಜ್ಯದಲ್ಲೇ ಈ ಬೆಲೆ ಹೆಚ್ಚಾಗಿದೆಯಂತೆ.

 

ಮಹಾರಾಷ್ಟ್ರದ ಮಂಡಿಯಲ್ಲಿ ಒಂದು ಕ್ವಿಂಟಾಲ್ ಈರುಳ್ಳಿಯ ಬೆಲೆ 3753 ರೂಪಾಯಿ ಇದೆ. ಅಕ್ಟೋಬರ್ 2ನೇ ತಾರಿಖಿನ ವೇಳೆಗೆ ಈ ಬೆಲೆ 2850 ರೂಪಾಯಿ ಇತ್ತು. ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಈರುಳ್ಳಿಯ ಬೆಲೆ ಎರಡರಷ್ಟು ಹೆಚ್ಚಾಗಿದೆ. ಕನಿಷ್ಟ ಒಂದು ಕ್ವಿಂಟಾಲ್ ಗೆ 1200 ರಿಂದ 1500 ರಷ್ಟು ಹೆಚ್ಚಾಗಿದೆ. ಈ ಬೆಲೆಗಳು ಮತ್ತಷ್ಟು ಹೆಚ್ಚು ನಿರೀಕ್ಷೆ ಇದೆ.

 

ಈಗ ಇಷ್ಟೊಂದು ಪ್ರಮಾಣದಲ್ಲಿ ಈರುಳ್ಳಿಯ ಬೆಲೆ ಜಾಸ್ತಿಯಾಗೋಕೆ ಅದ್ರಲ್ಲೂ ಡಬಲ್ ಆಗೋಕೆ ಕಾರಣವೇನು ಎನ್ನುವುದನ್ನು ವ್ಯಾಪಾರಿಗಳು ಮತ್ತು ಈರುಳ್ಳಿ ಬೆಳೆಗಾರರು ವಿವರಿಸಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ದೊಡ್ಡ ಗೋಡೌನ್​ಗಳಲ್ಲಿ ಶೇಖರಣೆಯಾಗಿದ್ದ ಈರುಳ್ಳಿ ಪ್ರವಾಹದಿಂದಾಗಿ ನಾಶವಾಗಿಬಿಡ್ತು. ಇಟ್ಟಲೇ ಟನ್​ಗಟ್ಟಲೆ ಈರುಳ್ಳಿ ಕೊಳೆತು ಹೋಗಿದೆ. ಹಾಗಾಗಿ ಈಗಿರುವ ಈರುಳ್ಳಿಗೆ ಬೆಲೆ ಹೆಚ್ಚಿದೆ.

 

ಸೆಪ್ಟೆಂಬರ್ 2ರಂದು ಪಿಂಪಗಾವ್ ಮಂಡಿಯಲ್ಲಿ ಈರುಳ್ಳಿಯ ಆರಂಭಿಕ ಬೆಲೆ ಕೇವಲ 950 ರೂಪಾಯಿಗಳಷ್ಟಿತ್ತು. ಆದರೆ ಇದೇ ತಳಿಯ ಒಂದು ಕ್ವಿಂಟಾಲ್ ಗೆ ಗರಿಷ್ಟ ಬೆಲೆ 1701 ರೂಪಾಯಿ ಇತ್ತು. ಆಗಸ್ಟ್ 25ಕ್ಕೆ 600 ರಿಂದ 1781 ರೂಪಾಯಿಯ ಕನಿಷ್ಟ – ಗರಿಷ್ಟ ಬೆಲೆ ಈರುಳ್ಳಿಗೆ ಇತ್ತು.

 

ಈರುಳ್ಳಿಯ ಬೆಲೆ ಹೋಲ್​ ಸೇಲ್ ಮಾರುಕಟ್ಟೆಯಲ್ಲಿ ಏರಿಕೆ ಕಂಡಿರುವುದರಿಂದ ರೈತರಂತೂ ಖುಷಿಯಾಗಿದ್ದಾರೆ. ಈಗಾಗಲೇ ಪ್ರವಾಹ ಮತ್ತಿತರ ಕಾರಣಗಳಿಂದ ಲಕ್ಷಗಟ್ಟಲೆ ನಷ್ಟವನ್ನೇ ಅನುಭವಿಸಿದ್ದ ರೈತರು ಕೊನೆಗೂ ಒಂದಷ್ಟು ರೇಟ್ ಬಂದಿದ್ದು ನೋಡಿ ಸಂತಸಪಟ್ಟಿದ್ದಾರೆ. ಒಂದು ಕೆಜಿ ಈರುಳ್ಳಿ ಬೆಳೆಯಲು ರೈತನಿಗೆ ಮೊದಲು 15 ರುಪಾಯಿ ಖರ್ಚಾಗುತ್ತಿತ್ತು, ಈಗ ಅದು 16 ರೂಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಕೆಜಿಗೆ 30 ರೂಪಾಯಿ ಸಿಕ್ಕರೆ ಅಷ್ಟರಮಟ್ಟಿಗೆ ರೈತ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾನೆ.

 

ಹಾಗಿದ್ರೆ ಬೆಲೆಯೇರಿಕೆ ಆಗೇ ಆಗುತ್ತಾ? ಈಗಿನ ಪರಿಸ್ಥಿತಿ ನೋಡಿದ್ರೆ ಹೌದು ಎನಿಸುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರವಾಹದಿಂದ ಈರುಳ್ಳಿ ನಾಶವಾಗಿದ್ರೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ತೌಕ್ತೆ ಮತ್ತು ಯಾಸ್ ಚಂಡಮಾರುತದಿಂದ ರೈತರು ಬೆಳೆದ ಈರುಳ್ಳಿ ಹೊಲಗಳಲ್ಲೇ ಕೊಳೆತು ಹೋಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈರುಳ್ಳಿಯ ಬೆಲೆಗಳು ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.


Spread the love

About Ad9 News