Breaking News

ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿವೆ

Spread the love

  ಅಕ್ಟೋಬರ್ ತಿಂಗಳು (October 2021) ಇಂದು ಕೊನೆಯಾಗಲಿದೆ. ಸೋಮವಾರದಿಂದ ನವೆಂಬರ್ ತಿಂಗಳು ಆರಂಭವಾಗಲಿದೆ. ಇನ್ನು ತಿಂಗಳು ಆರಂಭವಾಗುತ್ತಿದ್ದಂತೆ ಪ್ರಮುಖ ಐದು ನಿಯಮಗಳಲ್ಲಿ ಬದಲಾವಣೆಗಳಾಗಲಿದ್ದು, ಇವು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿವೆ.

ಹೌದು, ಮುಂದಿನ ತಿಂಗಳ ಮೊದಲ ದಿನಾಂಕದಿಂದ ಅಂದರೆ ನವೆಂಬರ್ 1 (1st November 2020) ದೇಶಾದ್ಯಂತ ಅನೇಕ ಪ್ರಮುಖ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ನಿಮ್ಮ ಜೇಬು ಮತ್ತು ಜೀವನದ ಮೇಲೆ ನೇರ ಪರಿಣಾಮ ಬೀರುತ್ವೆ. (Changes from 1 nov). ಆದ್ದರಿಂದ ಈ ನಿಯಮಗಳನ್ನ ಮುಂಚಿತವಾಗಿ ನೀವು ತಿಳಿಯುವುದು ಮುಖ್ಯ.

ನವೆಂಬರ್ 1 ರಿಂದ, ಬ್ಯಾಂಕುಗಳಿಗೆ ಹಣವನ್ನ ಠೇವಣಿ ಮಾಡುವುದರಿಂದ ಹಿಡಿದು ಹಣವನ್ನ ವಿತ್‌ ಡ್ರಾ ಮಾಡಿಕೊಳ್ಳುವ ನಿಯಮಗಳು ಬದಲಾವಣೆ. ಅದೇ ಸಮಯದಲ್ಲಿ, ರೈಲ್ವೆ ಟೈಮ್ ಟೇಬಲ್ ಸಹ ಬದಲಾಗುತ್ತದೆ. ಅಲ್ಲದೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ನವೆಂಬರ್ 1 ರಿಂದ ಬದಲಾಗಲಿರುವ ಕೆಲವು ವಿಷಯಗಳನ್ನ ನೋಡೋಣ.

1. ಎಲ್ ಪಿಜಿ ಸಿಲಿಂಡರ್ ಬೆಲೆ (LPG cylinder price)
ನವೆಂಬರ್ 1ರಿಂದ ಎಲ್ ಪಿಜಿ ಸಿಲಿಂಡರ್ ಬೆಲೆ(LPG cylinder price) ಬದಲಾಗಬಹುದು. ಇನ್ನು ಈ ಬಾರಿಯೂ ಸಿಲೆಂಡರ್‌ ಬೆಲೆ ಹೆಚ್ಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಎಲ್ ಪಿಜಿ ಮಾರಾಟಕ್ಕೆ ಉಂಟಾದ ನಷ್ಟದ ಹಿನ್ನೆಲೆಯಲ್ಲಿ, ಸರ್ಕಾರವು ಮತ್ತೊಮ್ಮೆ ಎಲ್ ಪಿಜಿ ಸಿಲಿಂಡರ್ʼಗಳ ಬೆಲೆಗಳನ್ನು ಹೆಚ್ಚಿಸಬಹುದು.

2. ಬ್ಯಾಂಕಿಂಗ್ ನಿಯಮಗಳು ಬದಲಾವಣೆ (Banking Rules Change)
ಬ್ಯಾಂಕುಗಳು ಈಗ ತಮ್ಮ ಹಣವನ್ನ ಠೇವಣಿ ಮಾಡಲು ಮತ್ತು ಹಿಂತೆಗೆದುಕೊಳ್ಳಲು ಶುಲ್ಕಗಳನ್ನು ಪಾವತಿಸಬೇಕಾಗುತ್ತೆ. ಇದನ್ನು ಬ್ಯಾಂಕ್ ಆಫ್ ಬರೋಡಾ (BOB) ಪ್ರಾರಂಭಿಸಿದೆ. ಮುಂದಿನ ತಿಂಗಳಿನಿಂದ ನಿಗದಿತ ಮಿತಿಯನ್ನ ಮೀರಿದ ಬ್ಯಾಂಕಿಂಗ್ ಪ್ರತ್ಯೇಕ ಶುಲ್ಕಗಳನ್ನ ಆಕರ್ಷಿಸುತ್ತದೆ. ನವೆಂಬರ್ 1ರಿಂದ ಸಾಲದ ಖಾತೆಗೆ ಗ್ರಾಹಕರು 150 ರೂ. ಪಾವತಿಸಬೇಕಾಗುತ್ತದೆ. ಖಾತೆದಾರರು ಮೂರು ಬಾರಿ ಮಾತ್ರ ಉಚಿತವಾಗಿ ಠೇವಣಿ ಮಾಡಬೋದು. ಆದ್ರೆ, ಗ್ರಾಹಕರು ನಾಲ್ಕನೇ ಬಾರಿಗೆ ಹಣವನ್ನ ಠೇವಣಿ ಮಾಡಿದ್ರೆ, ಅವರು 40 ರೂ. ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ಜನಾಧನ್ ಖಾತೆದಾರರು ಸ್ವಲ್ಪ ಪರಿಹಾರವನ್ನ ಪಡೆದಿದ್ದಾರೆ. ಯಾಕಂದ್ರೆ, ಅವ್ರು ಠೇವಣಿಯ ಮೇಲೆ ಯಾವುದೇ ಶುಲ್ಕವನ್ನ ಪಾವತಿಸಬೇಕಾಗಿಲ್ಲ, ಆದ್ರೆ, ಹಿಂಪಡೆಯುವಾಗ 100 ರೂ. ಪಾವತಿಸಬೇಕಾಗುತ್ತೆ.

3. ರೈಲುಗಳ ವೇಳಾಪಟ್ಟಿ ಬದಲಾವಣೆ (Change of Trains Time Table)
ಭಾರತೀಯ ರೈಲ್ವೆ (Indian Railways) ದೇಶಾದ್ಯಂತ ರೈಲುಗಳ ಸಮಯ ಪಟ್ಟಿಯನ್ನ ಬದಲಾಯಿಸಲಿದೆ. ಈ ಮೊದಲು, ರೈಲುಗಳ ಸಮಯ ಕೋಷ್ಟಕವನ್ನು ಅಕ್ಟೋಬರ್ 1 ರಿಂದ ಬದಲಾಯಿಸಬೇಕಾಗಿತ್ತು. ಆದ್ರೆ, ಕೆಲವು ಕಾರಣಗಳಿಗಾಗಿ ಅಕ್ಟೋಬರ್ 31ರ ದಿನಾಂಕವನ್ನ ನಿಗದಿಪಡಿಸಲಾಗಿದೆ. ಇನ್ನು ಈ ಹೊಸ ವೇಳಾಪಟ್ಟಿಯನ್ನ ಈಗ ನವೆಂಬರ್ 1ರಿಂದ ಜಾರಿಗೆ ತರಲಾಗುವುದು. ತದನಂತರ, 13,000 ಪ್ರಯಾಣಿಕರು ರೈಲುಗಳು ಮತ್ತು 7,000 ಗೂಡ್ಸ್ ರೈಲುಗಳ ಸಮಯವನ್ನು ಬದಲಾಯಿಸುತ್ತಾರೆ. ದೇಶದಲ್ಲಿ ಚಲಿಸುವ ಸುಮಾರು 30 ರಾಜಧಾನಿ ರೈಲುಗಳ ಸಮಯವೂ ನವೆಂಬರ್ 1 ರಿಂದ ಬದಲಾಗಲಿದೆ.

4. ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಒಟಿಪಿ (OTP for gas cylinder booking)
ಎಲ್ ಪಿಜಿ ಸಿಲಿಂಡರ್ʼಗಳ (LPG cylinder) ವಿತರಣೆಯ ಸಂಪೂರ್ಣ ಪ್ರಕ್ರಿಯೆ ನವೆಂಬರ್ 1 ರಿಂದ ಬದಲಾಗಲಿದೆ. ಗ್ಯಾಸ್ ಬುಕ್ ಮಾಡಿದ ನಂತ್ರ ಗ್ರಾಹಕರ ಮೊಬೈಲ್ ಸಂಖ್ಯೆಗೆ ಒಟಿಪಿ(OTP) ಕಳುಹಿಸಲಾಗುತ್ತದೆ. ಸಿಲಿಂಡರ್ ಡೆಲಿವರಿಗಾಗಿ ಬಂದಾಗ ನೀವು ಈ ಒಟಿಪಿಯನ್ನ ಡೆಲಿವರಿ ಬಾಯ್ʼನೊಂದಿಗೆ ಹಂಚಿಕೊಳ್ಳಬೇಕು. ಒಮ್ಮೆ ಈ ಕೋಡ್ ಅನ್ನು ಸಿಸ್ಟಂನೊಂದಿಗೆ ಹೊಂದಿಸಿದ ನಂತ್ರ, ಗ್ರಾಹಕರು ಸಿಲಿಂಡರ್ʼನ್ನ ಡೆಲಿವರಿಯನ್ನ ಪಡೆಯುತ್ತಾರೆ.

5. ಈ ಮೊಬೈಲ್‌ʼಗಳನ್ನ ವಾಟ್ಸಾಪ್ ಕ್ಲೋಸ್(WhatsApp closes these mobiles)
ನವೆಂಬರ್ 1 ರಿಂದ ವಾಟ್ಸಾಪ್ ಕೆಲವು ಐಫೋನ್ʼಗಳು ಮತ್ತು ಆಂಡ್ರಾಯ್ಡ್ ಫೋನ್ʼಗಳಲ್ಲಿ ಕೆಲಸ ಮಾಡುವುದನ್ನ ನಿಲ್ಲಿಸಲಿದೆ. ವಾಟ್ಸಪ್ʼನ ಮಾಹಿತಿಯ ಪ್ರಕಾರ, ಫೇಸ್ ಬುಕ್ ಮಾಲೀಕತ್ವದ ಪ್ಲಾಟ್ ಫಾರ್ಮ್ ನವೆಂಬರ್ 1 ರಿಂದ ಆಂಡ್ರಾಯ್ಡ್ 4.0.3 ಐಸ್ ಕ್ರೀಮ್ ಸ್ಯಾಂಡ್ ವಿಚ್, ಐಒಎಸ್ 9 ಮತ್ತು ಕೈಒಎಸ್ 2.5.0 ಅನ್ನು ಬೆಂಬಲಿಸುವುದಿಲ್ಲ.

 


Spread the love

About Ad9 News